ಸಂಗ್ರಹ ಚಿತ್ರ 
ರಾಜ್ಯ

ಭೀಕರ ದೃಶ್ಯ: ಬೈಕ್‌ಗಳ ಮುಖಾಮುಖಿ ಡಿಕ್ಕಿ, ಗಂಡನ ಸಾವು, ತುಂಬು ಗರ್ಭಿಣಿ ಮಹಿಳೆ ಸ್ಥಿತಿ ಗಂಭೀರ!

ಸೇಡಂ ತಾಲೂಕಿನ ಕೋಡ್ಲಾ-ನಾಮವಾರ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ತುಂಬು ಗರ್ಭೀಣಿ ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ...

ಕಲಬುರಗಿ: ಸೇಡಂ ತಾಲೂಕಿನ ಕೋಡ್ಲಾ-ನಾಮವಾರ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ತುಂಬು ಗರ್ಭೀಣಿ ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. 
ನಾಮವಾರ ಗ್ರಾಮದ 29 ವರ್ಷದ ಹರಿಕೃಷ್ಣ ವಡ್ಡರ್ ಹೈದರಾಬಾದ್ ನಲ್ಲಿ ವಾಸವಿದ್ದು 21 ವರ್ಷದ ಪತ್ನಿ ಅಂಬಿಕಾ ಜೊತೆ ಹೈದರಾಬಾದ್ ನಿಂದ ಕಲಬುರಗಿಗೆ ಬಂದು ಅಲ್ಲಿಂದ ತಮ್ಮ ಊರಿಗೆ ದಂಪತಿಗಳು ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದ್ದು ಹರಿಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದು ಅಂಬಿಕಾ ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ. 
ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮತ್ತೊಂದು ಬೈಕ್ ನಲ್ಲಿದ್ದ ರಾಮು, ನಾಗಪ್ಪ, ನಿಂಗಪ್ಪ ಮೂವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರು ದಾನಮ್ಮ ದೇವಿಯ ದರ್ಶನ ಪಡೆದು ಮರಳಿ ಬರುವಾಗ ದುರ್ಘಟನೆ ಸಂಭವಿಸಿದೆ. 
ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

SCROLL FOR NEXT