ಗಾಯಿತ್ರಿ ಪ್ರಿಯಕರ ಅಂಜುಕುಮಾರ್ ವಿವಾಹದ ಚಿತ್ರ 
ರಾಜ್ಯ

ಪ್ರಸ್ಥಕ್ಕೂ ಮುನ್ನ ಕಿಡ್ನಾಪ್ ಕೇಸ್‌ಗೆ ಟ್ವಿಸ್ಟ್, ಆಕೆಗೆ ಲವರ್ ಜೊತೆ ಮೊದಲೇ ಮದುವೆಯಾಗಿತ್ತು!

ಪ್ರಸ್ಥಕ್ಕೂ ಮುನ್ನವೇ ನವ ವಿವಾಹಿತೆ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ನವ ವಿವಾಹಿತೆ ಗಾಯತ್ರಿ ಜಿಲ್ಲಾ ಪೊಲೀಸ್...

ಕೊಪ್ಪಳ: ಪ್ರಸ್ಥಕ್ಕೂ ಮುನ್ನವೇ ನವ ವಿವಾಹಿತೆ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ನವ ವಿವಾಹಿತೆ ಗಾಯತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ದಿಢೀರ್ ಅಂತಾ ಗುರುವಾರ ಸಂಜೆ ಆಗಮಿಸಿದ್ದಾರೆ. 
ವಧು ನಾಪತ್ತೆಯಾದ ವಿಚಾರ ಮಾಧ್ಯಗಳಲ್ಲಿ ವರದಿಯಾಗುತ್ತಿದ್ದರಿಂದ ಎಚ್ಚೆತ್ತ ವಧು ನಾಪತ್ತೆ ಕುರಿತು ಸ್ಪಷ್ಟನೆ ನೀಡಲು ಖುದ್ದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಅಲ್ಲದೇ ನಮ್ಮ ಜೀವಕ್ಕೆ ಅಪಾಯವಿದ್ದು ನಮಗೆ ರಕ್ಷಣೆ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ. 
ನಾಪತ್ತೆಯಾಗಿದ್ದ ವಧು ಗಾಯತ್ರಿ ಮಾಧ್ಯಮಗಳ ಜೊತೆ ಮಾತನಾಡಿ ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನು ಸ್ವ-ಇಚ್ಛೆಯಿಂದಲೇ ಅವರೊಂದಿಗೆ ಹೋಗಿದ್ದೇನೆ. ನಾನು ಅಂಜುಕುಮಾರ್ ಪ್ರೀತಿಸುತ್ತಿದ್ದೇವು. ನಾವು ಈಗಾಗಲೇ ಮದುವೆಯಾಗಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ವಿರೋಧವಿತ್ತು. ವಿಷಯ ಗೊತ್ತಿದ್ದರೂ ಸಹ ನಮ್ಮ ಕುಟುಂಬದವರು ನಮ್ಮ ಮಾವನ ಜೊತೆ ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದರು. ಹೀಗಾಗಿ ನಾನು ಒಪ್ಪಿಯೇ ಅಂಜನ್ ಜೊತೆ ಹೋಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. 
ಕಳೆದ 15 ದಿನದ ಹಿಂದಷ್ಟೇ ಮಲ್ಲನಗೌಡ ಮತ್ತು ಗಾಯತ್ರಿ ಮದುವೆ ನಡೆದಿತ್ತು. ವಧುವಿನ ತವರು ಮನೆಯಲ್ಲೇ ಫಸ್ಟ್ ನೈಟ್ ನಿಗದಿಯಾಗಿತ್ತು. ಆದರೆ ಆ ಮೊದಲ ರಾತ್ರಿಯಂದೇ ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು 6 ಜನ ಸಹಚರರು ಸೇರಿ ಗಾಯಿತ್ರಿಯನ್ನು ಕಿಡ್ನಾಪ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ