ರಾಜ್ಯ

ಮೈಸೂರು ದಸರಾ ವಿಶೇಷ: ಅ.14 ರ ಸಂಜೆ ರಿವೈಂಡ್ ರಾಗದಿಂದ ಭಾರತೀಯ ಸಿನಿರಂಗದ ಗತವೈಭವ ನೆನಪಿಸುವ ಕಾರ್ಯಕ್ರಮ

Srinivas Rao BV
ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈಗ ಎಲ್ಲಿ ನೋಡಿದರೂ ದಸರಾ ಸಡಗರ. ಅರಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಒಂದೆಡೆಯಾದರೆ  ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ಮತ್ತೊಂದೆಡೆ.
ದಸರಾ ಅಂಗವಾಗಿ ರಿವೈಂಡ್ ರಾಗ ಮೈಸೂರಿನ ಕಲಾಮಂದಿರದಲ್ಲಿ ಭಾರತೀಯ ಸಿನಿಮಾಗಳ ಹಳೆಯ ಹಾಡುಗಳ ಗಾಯನವನ್ನು ಆಯೋಜಿಸಿದೆ. 
ಅ.14 ರಂದು ಸಂಜೆ 8 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು 60-70 ರ ದಶಕದ ಭಾರತೀಯ ಸಿನಿರಂಗದ ನೆನಪುಗಳನ್ನು, ಹಾಡುಗಳನ್ನು ಮೆಲುಕು ಹಾಕಲಾಗುತ್ತದೆ. ಅತಿಶಯ್ ಜೈನ್ ಹಾಗೂ ಸಿಂಚನ ಚಂದನ್ ಅವರ ಗಾಯನ ಇರಲಿದೆ. 
SCROLL FOR NEXT