ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕ್ಯಾಸಿನೋ ಶೋಕಿಗಾಗಿ ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ

ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್​ಜಂಗ್ಲಿ ಎಂಬಾತ ಬಂಧಿತ ..

ಬೆಂಗಳೂರು:  ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್​ಜಂಗ್ಲಿ ಎಂಬಾತ ಬಂಧಿತ ಆರೋಪಿ.
ವೀಕ್ ಎಂಡ್​ನಲ್ಲಿ ಒಂಟಿಯಾಗಿ ಇರುವ ಮನೆಯ ಬಾಗಿಲು ಮುರಿದು ಕಳ್ಳತನ‌ ಮಾಡಿ ಬಳಿಕ ವಿಮಾನದಲ್ಲಿ‌ ಗೋವಾಗೆ ಹೋಗುತ್ತಿದ್ದ. ಅಲ್ಲಿ ಗೋವಾದಲ್ಲಿ ಕ್ಯಾಸಿನೋ ಆಡುವುದಕ್ಕಾಗಿ ಮನೆಕಳ್ಳತನ ಮಾಡುತ್ತಿದ್ದ. ಅದು ಕೂಡ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ರಾಡ್​​ನಿಂದ ಬೀಗ ಮುರಿದು ಎಂಟ್ರಿ‌ ಕೊಡುತ್ತಿದ್ದ. ನಂತರ ಫಿಂಗರ್ ಪ್ರಿಂಟ್ ಸಿಗಬಾರದು ಅಂತ‌ ಮುಟ್ಟಿದ ಜಾಗವನ್ನು ಬಟ್ಟೆಯಿಂದ ಕ್ಲೀನ್ ಮಾಡುತ್ತಿದ್ದ.
ಇದೀಗ ಗಿರಿನಗರ ಪೊಲೀಸರು ಬಂಧಿಸಿ ಪ್ರಕಾಶ್​​ನಿಂದ ಒಂದು ಡಿಯೋ ಬೈಕ್ ಸೇರಿದಂತೆ 600 ಗ್ರಾಂ ಚಿನ್ನಾಭರಣ ಸೇರಿದಂತೆ 18 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. 
ಕ್ಯಾಸಿನೋ  ಆಡುವುದರೊಂದಿಗೆ ಐಷಾರಾಮಿ ಜೀವನ ನಡೆಸಲು ಈತ ಕಳ್ಳತನ ಮಾಡುತ್ತಿದ್ದ, ಈತನ ವಿರುದ್ಧ ಕೊಡಿಗೆಹಳ್ಳಿಯಲ್ಲಿ 10 ಕೇಸ್, ವಿಜಯನಗರ ಠಾಣೆಯಲ್ಲಿ ಮತ್ತು ಚೆನ್ನಮ್ಮನಕೆರೆಯಲ್ಲಿ ಕೇಸ್ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನ: ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ- ಬಿಜೆಪಿ

SCROLL FOR NEXT