ರಾಜ್ಯ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಸಿಎಂ ಕುಮಾರಸ್ವಾಮಿ ನಿಲುವೇನು ಗೊತ್ತೇ?

Srinivas Rao BV
ಬೆಂಗಳೂರು: ದೇಶಾದ್ಯಂತ ಈಗ ಶಬರಿಮಲೆಗೆ ಮಹಿಳೆಯರ ಪ್ರವೆಶಕ್ಕೆ ಅನುಮತಿ ನೀಡಿರುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.  ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರೂ ಸಹ ಈ ಬಗ್ಗೆ ಮಾತನಾಡಿದ್ದು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 
ಚಂದ್ರಲೋಕದಲ್ಲಿ ವಾಸ ಮಾಡುವ ವ್ಯವಸ್ಥೆ ಮಾಡುವ ಹಂತಕ್ಕೆ ಚಿಂತನೆ ನಡೆಸುವ ಮಟ್ಟಕ್ಕೆ ನಾವು ವೈಜ್ಞಾನಿಕವಾಗಿ ಮುಂದುವರೆದಿದ್ದೇವೆ. ಇಷ್ಟೆಲ್ಲಾ ಇದ್ದರೂ ಪ್ರಕೃತಿ ವಿಕೋಪಗಳನ್ನು ತಡೆಯಲಾಗುತ್ತಿಲ್ಲ. ನಮ್ಮ ಪೂರ್ವಜರು ನಿರ್ದಿಷ್ಟ ಉದ್ದೇಶಗಳನ್ನಿಟ್ಟುಕೊಂಡು ಕೆಲವು ನಿಯಮಗಳನ್ನು ಮಾಡಿರುತ್ತಾರೆ. ಅವುಗಳಿಗೆ ನಿರ್ದಿಷ್ಟ ಉದ್ದೇಶಗಳಿರುತ್ತವೆ. ಆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. . ಹಿಂದೆ ಹೇಗೆ ನಡೆದುಕೊಂಡು ಬಂದಿದೆ ಹಾಗೇ ನಡೆದುಕೊಂಡು ಹೋಗಲಿ. ಇದನ್ನು ನಾನು ಸಿಎಂ ಆಗಿ ಹೇಳಿದ್ದಲ್ಲ, ಬದಲಾಗಿ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಲಿಂಗಾಯತ ಧರ್ಮದ ವಿಷಯದಲ್ಲಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹೆಚ್ ಡಿಕೆ, ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತಾಡಿಲ್ಲ. ಧರ್ಮ ವಿಚಾರದಲ್ಲಿ ಧರ್ಮಗುರುಗಳ ಜತೆ ಮಾತಾಡಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
SCROLL FOR NEXT