ರಾಜ್ಯ

ಭದ್ರಾವತಿ: ಕೊಳವೆ ಬಾವಿಯಲ್ಲಿ ಬರುತ್ತಿದೆ ಬಿಸಿನೀರು!

Shilpa D
ಭದ್ರಾವತಿ:  ಭದ್ರಾವತಿಯ ತಡಸಾ ಗ್ರಾಮದ ಪರಮೇಶ್ವರಪ್ಪ ಎಂಬುವರಿಗೆ ಸೇರಿದ ಬೋರ್ ವೆಲ್ ನಲ್ಲಿ ಬಿಸಿನೀರು ಬರುತ್ತಿದೆ, ಕಳೆದ ಒಂದು ವಾರದಿಂದ  ಬಿಸಿನೀರು ಬರುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. 
ಮೊದಲಿಗೆ ಆರಂಭದಲ್ಲಿ 200 ಲೀಟರ್ ಬೆಚ್ಚಗಿನ ನೀರು ಬರುತ್ತದೆ, ಆನಂತರ50 ಲೀಟರ್ ನಷ್ಟು ಕುದಿವ ನೀರು ಬರುತ್ತದೆ. ಇದರಿಂದ ಸ್ನಾನ ಮಾಡುವಷ್ಟು ನೀರು ಬಿಸಿ ಇರುತ್ತದೆ, ಅದಾದ ನಂತರ ತಣ್ಣೀರು ಬರುತ್ತದೆ ಇದೇ ಸ್ಥಳದಲ್ಲಿರುವ ಇತರೆ ನಾಲ್ಕು ಬೋರ್ ವೆಲ್ ಗಳಲ್ಲಿ ತಣ್ಣೀರು ಬರುತ್ತಿದೆ.
ಪ್ರತಿದಿನ ಬೆಳಗ್ಗೆ ಬಿಸಿನೀರು ಬರುತ್ತಿರುವುದು ಕುಟುಂಬದವರಿಗೆ ದೊಡ್ಡ ಪ್ರಶ್ನೆಯಾಗಿದೆ, ಭದ್ರಾವತಿಯ ಒಂದು ಸಣ್ಣ ಗ್ರಾಮವಾಗಿದ್ದು, ವಿಜ್ಞಾನಿಗಳು ಹಾಗೂ ಭೂಗರ್ಭ ಶಾಸ್ತ್ರಜ್ಞರಿಗೆ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ.
ವಾರದ ಹಿಂದೆ ಒಂದು ದಿನ ಬೆಳಗ್ಗೆ ನನ್ನ ಪತ್ನಿಗೆ ಬೋರ್ ವೆಲ್ ನಿಂದ ಬಿಸಿ ನೀರು ಬರುತ್ತಿರುವುದು ಗೊತ್ತಾಯಿತು. ಬಿಸಿಲ ತಾಪ ಹೆಚ್ಚಾಗಿರುವುದರಿಂದ  ನೀರು ಬಿಸಿಯಾಗಿದೆ ಎಂದು ಆಕೆ ಭಾವಿಸಿದರು.ಅದರ ಮಾರೇನ ದಿನವೂ ಕೂಡ ಬಿಸಿನೀರು ಬರಲು ಆರಂಭಿಸಿದೆ, ನೀರು ಎಷ್ಟು ಬಿಸಿ ಇತ್ತೆಂದರೇ ಪೈಪ್ ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ ಎಂದು ಪರಮೇಶ್ವರಪ್ಪ ಹೇಳಿದ್ದಾರೆ.
ಇದನ್ನು ಪರಮೇಶ್ವರಪ್ಪ ಸಹೋದರ ಸಿವಿಲ್ ಎಂಜಿನೀಯರ್ ಮಂಜಪ್ಪ ಅವರಿಗೆ ತಿಳಿಸಿದರು. 25 ವರ್ಷದ ಹಿಂದೆ, 110 ಅಡಿ ಬೊರ್ ವೆಲ್ ಕೊರೆಸಲಾಗಿತ್ತು, ಇದೇ ಮೊದಲ ಬಾರಿಗೆ ಬಿಸಿನೀರು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಂತರ ಅವರು ಭೂಗೋಳತಜ್ಞರಿಗೆ ತಿಳಿಸಿದರು ಎಂದು ಹೇಳಿದರು. 
SCROLL FOR NEXT