ಮಾಸಾಂತ್ಯದೊಳಗೆ ನಗರ ಸ್ವಚ್ಛಗೊಳದಿದ್ದರೆ ಬಿಬಿಎಂಪಿ ಆಯುಕ್ತರೇ ಹೊಣೆ- ಹೈಕೋರ್ಟ್
ಈ ತಿಂಗಳ ಅಂತ್ಯದೊಳಗೆ ಬೆಂಗಳೂರು ನಗರವನ್ನು ಸ್ವಚ್ಛಗೊಳದಿದ್ದರೆ ಬಿಬಿಎಂಪಿ ಆಯುಕ್ತರೇ ಹೊಣೆ ಹೊರಬೇಕಾಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶ ದಿನೇಶ್ ಮಹೇಶ್ವರಿ ಮತ್ತು ನ್ಯಾಯಾಧೀಶ ಎಸ್. ಜಿ. ಪಂಡಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಗಡವು ನೀಡಿದೆ.
ಬೆಂಗಳೂರು: ಈ ತಿಂಗಳ ಅಂತ್ಯದೊಳಗೆ ಬೆಂಗಳೂರು ನಗರ ಸ್ವಚ್ಛಗೊಳದಿದ್ದರೆ ಬಿಬಿಎಂಪಿ ಆಯುಕ್ತರೇ ಹೊಣೆ ಹೊರಬೇಕಾಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶ ದಿನೇಶ್ ಮಹೇಶ್ವರಿ ಮತ್ತು ನ್ಯಾಯಾಧೀಶ ಎಸ್. ಜಿ. ಪಂಡಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಗಡವು ನೀಡಿದೆ.
ರಾಜಧಾನಿ ಬೆಂಗಳೂರಿನ ಗುಂಡಿಗಳ ಬಗ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಬಿಬಿಎಂಪಿ ಆಯುಕ್ತ ಎನ್ . ಮಂಜುನಾಥ್ ಪ್ರಸಾದ್ ಅವರಿಗೆ ನ್ಯಾಯಾಲಯ ಈ ಸೂಚನೆ ನೀಡಿದೆ.
ಉದ್ಯಾನನಗರಿ ಎಂದೇ ಹೆಸರಾಗಿರುವ ಬೆಂಗಳೂರು ಮರಳಿ ತನ್ನ ಸೌಂದರ್ಯ ಪಡೆಯಬೇಕು. ಕಸಮುಕ್ತ ನಗರವಾಗಬೇಕು, ಆಗಲ್ಲ ಎಂದು ಹೇಳುವಂತಿಲ್ಲ ಎಂದು ನ್ಯಾಯಾಲಯ ಹೇಳುವ ಮೂಲಕ ಹೋರ್ಡಿಂಗ್ ಮುಕ್ತ ನಗರವಾಗಿಸಿದ ನಂತರ ಈಗ ಸ್ವಚ್ಛ ಬೆಂಗಳೂರು ರೂಪಿಸುವ ನಿಟ್ಟಿನಲ್ಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಬಿಬಿಎಂಪಿ ಬಗ್ಗೆ ಜನರು ಇಟ್ಟಿಕೊಂಡಿರುವ ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳಬೇಕು ರಸ್ತೆಗಳಲ್ಲಿ ವಾಹನಗಳು ಸುಲಭವಾಗಿ ಸಂಚರಿಸುವಂತಾಗಬೇಕು, ಗುಂಡಿಗಳು ಸರಿಯಾದಲ್ಲೀ ಸಂಚಾರ ದಟ್ಟಣೆಯೂ ಸುಗಮವಾಗುತ್ತದೆ ಎಂದು ಹೇಳಿರುವ ನ್ಯಾಯಾಲಯ, ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಕೊಂಡು ರಾಜಕಾಲುವೆ ಸ್ವಚ್ಛಗೊಳಿಸುವಂತೆ ಎಚ್ಚರಿಕೆ ನೀಡಿದೆ.