ರಾಜ್ಯ

ಬೆಂಗಳೂರು: ಆಗಸ್ಟ್ ನಿಂದ ನವೆಂಬರ್ ವರೆಗೆ ರೌಡಿಗಳ ನೇಮಕಾತಿ ಸಮಯ!

Shilpa D
ಬೆಂಗಳೂರು: ರೌಡಿ ಗ್ಯಾಂಗ್ ಗೂ ನೇಮಕಾತಿ ಸಮಯವಿದೆ ಎಂದು ಹೇಳಿದರೇ ನೀವು ನಂಬುತ್ತೀರಾ? ಕಷ್ಟವಾದರೂ ಇದು ನಂಬಲೇ ಬೇಕಾದ ಸತ್ಯ. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ ಆಗಸ್ಟ್ ನಿಂದ ನವೆಂಬರ್ ವರೆಗೂ ರೌಡಿ ಗ್ಯಾಂಗ್  ನೇಮಕಾತಿ ಸಮಯವಂತೆ,  ಗಣೇಶ ಹಬ್ಬದಿಂದ ರಾಜ್ಯೋತ್ಸವದ ವರೆಗೂ ಈ ನೇಮಕಾತಿ ನಡೆಯುತ್ತದೆ.
ಈ  ವೇಳೆಯಲ್ಲೇ ನೇಮಕಾತಿ ಮಾಡುವುದಕ್ಕೂ ಕಾರಣವಿದೆ, ಏನೆಂದರೇ ಹಬ್ಬದ ಆತರಣೆ ಸಂದರ್ಭಗಳಲ್ಲಿ ಉದ್ಯಮಿಗಳಿಂದ ಮತ್ತು ನಗರದಲ್ಲಿನ ನಿವಾಸಿಗಳಿಂದ ಹಣ ಸುಲಿಗೆ ಮಾಡಲು ನೇಮಕಾತಿ ಮಾಡಲಾಗುತ್ತದೆ.ಗಣೇಶ ಹಬ್ಬದಿಂದ ಆರಂಭವಾಗುವ ಹಣ ಸುಲಿಗೆ ನವೆಂಬರ್ ಕನ್ನಜ ರಾಜ್ಯೋತ್ಸವದ ವರೆಗೂ ಇರುತ್ತದೆ ಇದು ಇತ್ತೀಚಿನ ಟ್ರೆಂಡ್ ಆಗಿದೆ ಎಂದು ನಿವೃತ್ತ ಎಸಿಪಿ ಬಿಬಿ ಅಶೋಕ್ ಕುಮಾರ್ ತಿಳಿಸಿದ್ದಾರೆ,
ಈ ಮೊದಲು ರಾಜ್ಯೋತ್ಸವವನ್ನು ಕೇವಲ ನವೆಂಬರ್ 1 ರಂದು ಮಾತ್ರ ಆಚರಿಸಲಾಗುತ್ತಿತ್ತು, ಆದರೆ ಇತ್ತೀಚೆಗೆ ಡಿಸೆಂಬರ್ ವರೆಗೂ ರಾಜ್ಯೋತ್ಸವ ಆಚರಿಸಲಾಗುತ್ತಿದೆ, ಈ ಸಮಯದಲ್ಲಿ ಹೆಚ್ಚಿನ ದಾಳಿಗಳು ನಡೆಯುವುದನ್ನು ನಾವಿಲ್ಲಿ ಗಮನಿಸಬಹುದು, ಹೊಸ ಗ್ಯಾಂಗ್ ಮೇಲೆ ಹಲ್ಲೆ, ದಾಳಿ ಸಾಮಾನ್ಯವಾಗಿರುತ್ತದೆ.
ರಾಜ್ಯೋತ್ಸವ ಹೆಸರಿನಲ್ಲಿ ಲವು ಯುವಕರು ಹಣ ವಸೂಲಿ ಮಾಡುತ್ತಾರೆ, ಒಂದು ಏರಿಯಾದಲ್ಲಿ ಎರಡರಿಂದ ಮೂರು ಗುಂಪುಗಳು ಕನ್ನಡ ರಾಜ್ಯೋತ್ಸವ ಆಚರಿಸಲು ಬಯಸುತ್ತಾರೆ, ಮೊದಲು .ಯಾರು ಧ್ವಜ ಕಂಬ ನೆಟ್ಟು ಧ್ವಜ ಹಾರಿಸುತ್ತಾರೆ ಎಂಬುದರ ಮೇಲೆ ಗ್ಯಾಂಗ್ ನ ಪ್ರಭಾವ ಎಷ್ಟು ಎಂಬುದು ತಿಳಿಯುತ್ತದೆ, ಇದೇ ಕಾರಣಕ್ಕೆ ಹಿಂದಿನಿಂದಲೂ ಹಲವು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಲೇ ಬಂದಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಹೇಳಿದ್ದಾರೆ.
ಹಿಗಾಗಿ ನಗರ ಪೊಲೀಸರು ಹಳೇಯ ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ,  ಯಾವುದೇ  ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ,  ರಾಜ್ಯೋತ್ಸವ ಹೆಸರಿನಲ್ಲಿ ಹಣ ಸುಲಿಗೆ ಮಾಡುವ ರೌಡಿ ಶೀಟರ್ ಗಳಿಗೆ ಪರೇಡ್ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ, 
ಯುವಕರ ಈ ಗ್ಯಾಂಗ್ ತಮ್ಮ ಏರಿಯಾದಲ್ಲಿ ಮೊದಲಿಗೆ ಧ್ವಜ ಕಂಬ ನೆಡಲು ಸಾಧ್ಯವಾಗುವುದಿಲ್ಲ, ಇದೇ ವಿಚಾರಕ್ಕೆ ಘರ್ಷಣೆಗಳು ನಡೆಯುತ್ತವೆ,ಇದು ಹಲ್ಲೆ ಹಾಗೂ ಕೊಲೆ ಯತ್ನದಂತ ಅಪರಾಧ ಪ್ರಕರಣಗಳಿಗೆ ಕಾರಣವಾಗುತ್ತದೆ, ಇದರಿಂದ ಅವರು ತಮ್ಮ ಹೆಸರು ಪ್ರಸಿದ್ಧವಾಗುತ್ತದೆ ಎಂದು ಬಯಸುತ್ತಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹೀಗಾಗಿ ಕನ್ನಡ ರಕ್ಷಣಾ ವೇದಿಕೆ  ಯುವಕರಲ್ಲಿ ಮನವಿ ಮಾಡಿದೆ, ನಮ್ಮ ರಾಜ್ಯದ ಬಗ್ಗೆ ನಮಗೆ ಪ್ರೀತಿಯಿದೆ, ನಮ್ಮ ಭಾಷೆ ಬಗ್ಗೆ ಹೆಮ್ಮೆ ಇದೆ, ಶಾಂತಿಯಿಂದ ರಾಜ್ಯೋತ್ಸವ ಆಚರಿಸುವಂತೆ  ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಮನವಿ ಮಾಡಿದ್ದಾರೆ.
SCROLL FOR NEXT