ಬೆಂಗಳೂರು: ನಗರದ ಸುಮಾರು 50 ಕ್ಕೂ ಹೆಚ್ಚಿನ ಖಾಸಗಿ ಶಾಲೆಗಳು ಸರ್ಕಾರದ 2015ರ ಕನ್ನಡ ಕಲಿಕೆ ಕಡ್ಡಾಯ ನಿಯಮವನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ, ಪ್ರಸಕ್ತ ವರ್ಷದಿಂದ ಕನ್ನಡ ಕಲಿಕೆ ಕಡ್ಡಾಯವಾಗಿ ಅಳವಡಿಸುವಂತೆ ರಾಜ್ಯ ಸರ್ಕಾರ ನಿಯಮ ಜಾರಿಗೆ ತಂದಿದೆ.
ಪ್ರಥಮ ಹಾಗೂ ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸಬೇಕೆಂದು ವಿವಿಧ ಬೋರ್ಡ್ ಗಳಿಂದ ಮಾನ್ಯತೆ ಪಡೆದಿರುವ ಖಾಸಗಿ ಶಾಲೆಗಳಿಗೆ ಸೂಚಿಸಲಾಗಿತ್ತು, ಆದರೆ ಸುಮಾರು 50 ಶಾಲೆಗಳು ಈ ನಿಯಮ ಪಾಲಿಸುತ್ತಿಲ್ಲ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನಂತೆ ರಾಜ್ಯ ಸರ್ಕಾರ ಈ ಕಾಯಿದೆ ಜಾರಿಗೆ ತಂದಿದೆ, ರಾಜ್ಯ ಸರ್ಕಾರ ನಡೆಸುತ್ತಿರುವ ಎಲ್ಲಾ ಶಾಲೆಗಳನ್ನು ಕನ್ನಡ ಕಲಿಕೆ ಅನುಷ್ಠಾನಗೊಂಡಿದೆ, ಪ್ರಸಕ್ತ ಶೈಕ್ಷಮಿಕ ವರ್ಷ ಆರಂಭವಾಗಿ ಆರು ತಿಂಗಳು ಕಳೆದರು ಕೆಲ ಶಾಲೆಗಳು ಇನ್ನೂ ಆರಂಭಿಸದೇ ನಿಯಮ ಉಲ್ಲಂಘನೆ ಮಾಡಿವೆ.
ಸಿಬಿಎಸ್ ಇ ಮತ್ತು ಐಸಿಎಸ್ ಇ ಮಾನ್ಯತೆ ಪಡೆದಿರುವ ಕೆಲ ಶಾಲೆಗಳು ಕನ್ನಡ ಕಲಿಕೆ ಕಡ್ಡಾಯ ನೀತಿಗೆ ವಿರೋಧ ವ್ಯಕ್ತ ಪಡಿಸಿದ್ದವು.ಆದರೆ ನಂತರ ಇದ ರಾಜ್ಯ ಸರ್ಕಾರದ ನಿಯಮವಾದ ಹಿನ್ನೆಲೆಯಲ್ಲಿ ಶಾಲೆಗಳು ಬಲವಂತವಾಗಿ ಅನುಷ್ಠಾನಗೊಳಿಸಿದು, ಆದರೆ ಇತ್ತಿಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕನ್ನಡ ಕಲಿಸುತ್ತಿಲ್ಲ ಎಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ಜರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಪ್ರಾಧಿಕಾರದ ಅಧ್ಯಕ್ಷರ ಪುತ್ರದ ಆಧಾರದ ಮೇರೆಗೆ ನಗರ ವ್ಯಾಪ್ತಿಯ ಎಲ್ಲಾ ಡಿಡಿಪಿಐ ಗಳು ಶಾಲೆಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಕನ್ನಡ ಕಲಿಕೆ ಅನುಷ್ಠಾನಗೊಳಿಸದ ಶಾಲೆಗಳಿಗೆ ಮೊದಲು ನೊಟೀಸ್ ನೀಡುತ್ತೇವೆ ಎಂದು ಬಸವರಾಜ್ ಹೇಳಿದ್ದಾರೆ,.
ಸರ್ಕಾರಕ್ಕೆ ಪಕ್ರ ಬರೆದು ಹಲವು ದಿನಗಳು ಕಳೆದಿವೆ, ಆದರೇ ಸರ್ಕಾರದಿಂದ ಇದೂವರೆಗೂ .ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಸಂಬಂಧ ಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.