ರಾಜ್ಯ

ಬೆಂಗಳೂರು: 3 ಗಂಟೆಗಳಲ್ಲಿ ಐದು ಕಡೆ ಸರಗಳ್ಳತನ

Manjula VN
ಬೆಂಗಳೂರು: ಕೆಲ ದಿನಗಳಿಂದ ಬಿಡುವು ಪಡೆದಿದ್ದ ಸರಗಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿಸಲು ಆರಂಭಿಸಿದ್ದರು, ರಾಜಧಾನಿಯಲ್ಲಿ ಶನಿವಾರ ಮತ್ತೆ ಮೂರು ಗಂಟೆಗಳಲ್ಲಿ 5 ಕಡೆ ಸರಗಳ್ಳನತ ಕೃತ್ಯ ಎಸಗಿ ಸದ್ದು ಮಾಡಿದ್ದಾರೆ. 
ಸದಾಶಿವನಗರ, ಬಾಣಸವಾಡಿ, ಹೆಣ್ಣೂರು ಹಾಗೂ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಿಟಿಎಂ ಬೈಕ್ ಸದ್ದು ಮಾಡಿದೆ. 2 ತಂಡಗಳು ಈ ಕೃತ್ಯ ಎಸಗಿವೆ ಎಂದು ಪೊಲೀಸರು ಶಂಕಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 
ನಿನ್ನೆ ಬೆಳಿಗ್ಗೆ 9.30ರ ಸುಮಾರಿಗೆ ಕೆಲಸದ ನಿಮಿತ್ತ ಅಪಾರ್ಟ್'ಮೆಂಟ್ ನತ್ತ ಹೋಗುತ್ತಿದ್ದ 40 ವರ್ಷದ ಅನುರಾಧ ಎಂಬ ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಬಂದು ಹಿಂಬಾಲಿಸಿದ ಕದೀಮರು ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಕೂಡಲೇ ಕೂಗಾಡಿದ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾರೆ. 
ಇದರಂತೆ ಕಸ್ತೂರಿ ನಗರದಲ್ಲಿಯೂ 44 ವರ್ಷದ ಮಹಿಳೆಯೊಬ್ಬು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. 
ಸಂಜಯನಗರದ ಪೋಸ್ಟರ್ ಕಾಲೋನಿ ನಿವಾಸಿಯಾಗಿರುವ ತನುಜಾ ಎಂಬುವವರ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ. ರಾಮಯ್ಯ ಆಸ್ಪತ್ರೆಗೆ ಹೋಗಿದ್ದ ಮಹಿಳೆಯ ಮಧ್ಯಾಹ್ನ 12.30ರ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದಿರುವ ಕಳ್ಳರು ಮಹಿಳೆ ಮೇಲೆ ದಾಳಿ ಮಾಡಿ ಸರಗಳ್ಳತನ ಮಾಡಿದ್ದಾರೆ.  ಇದೇ ರೀತಿ ಬಾಣಸವಾಡಿ ಹಾಗೂ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಘಟನೆಗಳು ನಡೆದಿವೆ. 
ಪ್ರಕರಣಗಳ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲಾ ಠಾಣೆಗಳಿಗೂ ಮಾಹಿತಿಗಳನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಎಲ್ಲಾ ಐದು ಘಟನೆಗಳು 3 ಗಂಟೆಗಳಲ್ಲಿ ನಡೆದಿದೆ. ಒಂದೇ ತಂಡ ಈ ಅಪರಾಧ ಕೃತ್ಯಗಳನ್ನು ಎಸಗಿದೆ ಎಂದು ಶಂಕಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದವರು ಕೃತ್ಯವೆಸಗಿದ್ದಾರೆಂದು ಶಂಕಿತಲಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT