ರಾಜ್ಯ

ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕಡಿವಾಣ, ಸುತ್ತೋಲೆ ಮೂಲಕ ನಿಯಂತ್ರಣ ಹೇರಿದ ಸರ್ಕಾರ

Raghavendra Adiga
ಬೆಂಗಳೂರು: ಇನ್ನು ರಾಜ್ಯದ ಗಣ್ಯರು, ಆಡಳಿತಶಾಹಿಗಳಿಗೆ ವಿದೇಶ ಪ್ರವಾಸ ತೆರಳುವುದು ಅಷ್ಟು ಸರಳವಾಗಿರುವುದಿಲ್ಲ. ಸರ್ಕಾರ ಹೊರಡಿಸಿರುವ ನೂತನ ಸುತ್ತೋಲೆಯ ಅನುಸಾರವಿದೇಅ ಪ್ರವಾಸದ ಎಲ್ಲಾ ವಿವರಗಳನ್ನು  ಮುಖ್ಯಮಂತ್ರಿಗಳಿಗೆ ನೇರವಾಗಿ ಅನುಮೋದನೆಗೆ ಕಳುಹಿಸುವ ಬದಲು ಇಲಾಖೆಗಳ ಉಸ್ತುವಾರಿ ಸಚಿವರಿಗೆ ನಿಡಬೇಕು.
ಅಲ್ಲದೆ ಐಎಎಸ್ ಅಧಿಕಾರಿಗಳ ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆಯಬೇಕೆನ್ನುವ ಮೂಲಕ ಅನುಮೋದನೆ ವ್ಯಾಪ್ತಿಯನ್ನು ಸಹ ವಿಸ್ತರಿಸಲಾಗಿದೆ
ಏಕಾಂಗಿಯಾಗಿ ಪ್ರಯಾಣಿಸುವ ಅಥವಾ ಸಚಿವರೊಂದಿಗೆ ನಿಯೋಗದ ಭಾಗವಾಗಿ, ಭೇಟಿ ನೀಡುವ ಅಧಿಕಾರಿಗಳು ಹಾಗೆ ಭೇಟಿ ನೀಡುವ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಬೇಕು. ಸಾಂಪ್ರದಾಯಿಕ ವೆಚ್ಚ ಹೊರತಾಗಿ ವಿದೇಶಿ ಆತಿಥ್ಯ ಸ್ವೀಕಾರ ಪ್ರವಾಸದ ಅಧಿಕಾರಿಗಳ ಜೊತೆಯಲ್ಲಿರುವವರ ವಿವರಗಳು ಸೇರಿ ಎಲ್ಲಾ ವಿವರಗಳನ್ನು ಪ್ರತಿ ಇಲಾಖೆಯ ಮಂತ್ರಿಗಳಿಂದ ಅನುಮತಿ ಪಡೆಯಬೇಕು.
ವ್ಯಕ್ತಿಗತ ಮತ್ತು ಆಡಳಿತಾತ್ಮಕ ಸುಧಾರಣೆಗಳ ಇಲಾಖೆ, ಮತ್ತು ಮುಖ್ಯಮಂತ್ರಿಗಳಿಗೆ ಮಾಹಿತಿ ರವಾನಿಸಬೇಕು. ವಿದೇಶಿ ಆತಿಥ್ಯದ ಸಂದರ್ಭದಲ್ಲಿ ಗೃಹ ಸಚಿವಾಲಯದೊಡನೆ ಸಮಾಲೋಚಿಸಿದ ಬಳಿಕ ಎಫ್ ಸಿ ಆರ್ ಎ ಅನುಮತಿ ಹೊರತಾಗಿ  ಐಎಎಸ್ ಅಧಿಕಾರಿಗಳಿಗೆ ವಿದೇಶಾಂಗ ಸಚಿವಾಲಯದಿಂದ ರಾಜಕೀಯ ಸ್ಪಷ್ಟೀಕರಣವನ್ನು ಪಡೆಯಲು ಹೇಳಲಾಗಿದೆ.
ಇಡೀ ಪ್ರಕ್ರಿಯೆಯು 2-3 ವಾರಗಳವರೆಗೆ ತೆಗೆದುಕೊಳ್ಳುತ್ತದೆ. ಅಧಿಕಾರಿಗಳು ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಅಗತ್ಯವಿದೆ, ಎಲ್ಲಾ ಸ್ಪಷ್ಟತೆಗಳನ್ನು ಪಡೆದುಕೊಳ್ಳಬೇಕು ಮತ್ತು ಮುಂಚಿತವಾಗಿ ತಮ್ಮ ಪತ್ರಗಳನ್ನು ಲಗತ್ತಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
SCROLL FOR NEXT