ರಾಜ್ಯ

ರೈತರು ಎಕರೆಗೆ 20 ಮರ ಬೆಳೆಸುವುದು ಕಡ್ಡಾಯ ಕಾನೂನು ತರಲು ಸರ್ಕಾರ ಚಿಂತನೆ: ಸಚಿವ ಶಂಕರ್

Lingaraj Badiger
ಬೆಂಗಳೂರು: ರೈತರು ಒಂದು ಎಕರೆ ಜಮೀನಿನಲ್ಲಿ ಕನಿಷ್ಠ 20 ಮರಗಳನ್ನು ಬೆಳೆಸುವುದು ಕಡ್ಡಾಯ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಅರಣ್ಯ ಸಚಿವ ಆ.ಶಂಕರ್ ಅವರು ಗುರುವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ್,  ಈ ಕಾನೂನಿನಿಂದ ರೈತರಿಗೂ ಅನುಕೂಲವಾಗಲಿದೆ ಜತೆಗೆ ಹಸಿರೀಕರಣವೂ ಹೆಚ್ಚಾಗಲಿದೆ. ರಾಜ್ಯದಲ್ಲಿ ಹಸಿರು ಕರ್ನಾಟಕ ಯೋಜನೆಗೆ ರಾಜ್ಯಾದ್ಯಂತ 10 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದಿದ್ದಾರೆ.
ಮರಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಮಳೆ ಬರುತ್ತದೆ ಎಂಬುದು ನಮಗೆ ಗೊತ್ತಿರುವ ವಿಚಾರ. ಹೀಗಾಗಿ ಹೆಚ್ಚು ಹೆಚ್ಚು ಮರಗಳನ್ನು ನೆಡುವುದ ಅಗತ್ಯವಿದ್ದು, ರೈತರೂ ಇದರಲ್ಲಿ ಭಾಗಿಯಾಗಬೇಕು ಎಂದು ಸಚಿವರು ಹೇಳಿದ್ದಾರೆ.
ಸರ್ಕಾರ ರೈತರು ಬೆಳೆಸುವ ಪ್ರತಿ ಮರಕ್ಕೆ 100 ರುಪಾಯಿ ಬೆಂಬಲ ಬೆಲೆ ನೀಡಲಿದೆ ಮತ್ತು ಪ್ರತಿ ಎಕರೆಗೆ 100 ಮರಕ್ಕೆ ಬೆಂಬಲ ಬೆಲೆ ನೀಡಲು ಅವಕಾಶವಿದೆ ಎಂದು ಶಂಕರ್ ಅವರು ತಿಳಿಸಿದ್ದಾರೆ.
SCROLL FOR NEXT