ಯಲ್ಲಾಪುರ ತಾಲ್ಲೂಕಿನ ಎರಪುರ ಗ್ರಾಮದಲ್ಲಿ ಹದಗೆಟ್ಟ ರಸ್ತೆ ಕಾಮಗಾರಿಯಲ್ಲಿ ತೊಡಗಿದ ಮಹಿಳೆಯರು 
ರಾಜ್ಯ

ಕಾರವಾರ: ಕೆಟ್ಟು ಹೋಗಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಊರಿಗೇ ಮಾದರಿಯಾದ ಮಹಿಳೆಯರು

ಮಹಿಳೆಯರು ಒಗ್ಗಟ್ಟಾದರೆ, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇದೊಂದು ...

ಕಾರವಾರ: ಮಹಿಳೆಯರು ಒಗ್ಗಟ್ಟಾದರೆ, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಈ ಗ್ರಾಮದ ನಿವಾಸಿಗಳು ಹಲವು ಬಾರಿ ಮನವಿ ಮಾಡಿಕೊಂಡರೂ ಸಹ ಜಿಲ್ಲಾ ಪಂಚಾಯತ್ ಆಗಲಿ, ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ ಇತ್ತ ತಲೆಯೇ ಹಾಕಿರಲಿಲ್ಲ.

ಇದು ಕಾರವಾರದ ಯಲ್ಲಾಪುರ ತಾಲ್ಲೂಕಿನ ಎರಪುರ್ ಗ್ರಾಮದ ದುಸ್ಥಿತಿ. 3 ವರ್ಷಗಳ ಹಿಂದೆ ಹದಗೆಡಲು ಆರಂಭವಾದ ಇಲ್ಲಿನ ರಸ್ತೆ ಇತ್ತೀಚೆಗೆ ಸಂಚರಿಸಲು ಸಾಧ್ಯವಾಗದಷ್ಟು ಹಾಳಾಗಿ ಹೋಗಿತ್ತು. ಪಟ್ಟಣದೊಂದಿಗೆ ಗ್ರಾಮಸ್ಥರು ಸುಮಾರಾಗಿ ಸಂಪರ್ಕವನ್ನು ಕಡಿದುಕೊಂಡಿದ್ದರೆಂದೇ ಹೇಳಬಹುದು. ದ್ವಿಚಕ್ರ ವಾಹನದಲ್ಲಿ ಕಷ್ಟಪಟ್ಟು ಸವಾರರು ಹೋಗುತ್ತಿದ್ದರೆ ನಾಲ್ಕು ಚಕ್ರದ ವಾಹನ ಓಡಾಡುತ್ತಲೇ ಇರಲಿಲ್ಲ. ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಿ ಹೆಬ್ಬಾರ್ ಕುಮ್ರಿ ಎಂಬಲ್ಲಿ ಬಸ್ಸು ಹಿಡಿಯುತ್ತಿದ್ದರು.

ಗ್ರಾಮವನ್ನು ಸಂಪರ್ಕಿಸುವ ವಾಯುವ್ಯ ಸಂಚಾರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸು ಹೊರತುಪಡಿಸಿ ಬೇರಾವ ಸಾರಿಗೆ ಕೂಡ ಇರಲಿಲ್ಲ. ಅದು ಕೂಡ ಇತ್ತೀಚಿನ ಮಳೆಗೆ ರಸ್ತೆ ತೀರಾ ಹದಗೆಟ್ಟರಿಂದ ಇದ್ದ ಒಂದು ಬಸ್ಸು ಕೂಡ ಬರುವುದು ನಿಂತುಹೋಯಿತು. ಈ ಬಗ್ಗೆ ಅಧಿಕಾರಿಗಳಲ್ಲಿ ಹೇಳಿ ಗ್ರಾಮಸ್ಥರಿಗೆ ಸಾಕಾಗಿ ಹೋಯಿತು,

ಎರಪುರ ಒಂದು ಸಣ್ಣ ಹಳ್ಳಿಯಾಗಿದ್ದು ಯಲ್ಲಾಪುರದಿಂದ ಕೇವಲ 27 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಸುಮಾರು 120 ಕುಟುಂಬಗಳು ನೆಲೆಸಿವೆ. ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಈ ಗ್ರಾಮವಿದ್ದು ಮಳೆಗಾಲದಲ್ಲಿ ಸಾಕಷ್ಟು ಮಳೆ ಸುರಿಯುತ್ತದೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪಟ್ಟಣವೆಂದರೆ ಯಲ್ಲಾಪುರ. ಎರಪುರ ಗ್ರಾಮದ ಜನರಿಗೆ ಏನೇ ಬೇಕೆಂದರೂ ಯಲ್ಲಾಪುರಕ್ಕೆ ಬರಬೇಕು. ಅಧಿಕಾರಿಗಳಿಗೆ ದೂರು ಸಲ್ಲಿಸಿ ಪ್ರಯೋಜನವಾಗದಿದ್ದ ಸಂದರ್ಭದಲ್ಲಿ  ಗ್ರಾಮದ 18 ಮಹಿಳೆಯರು ಒಟ್ಟು ಸೇರಿ ಸುಮಾರು 3 ಕಿಲೋ ಮೀಟರ್ ಉದ್ದದ ರಸ್ತೆಯನ್ನು ದುರಸ್ತಿ ಮಾಡಲು ಮುಂದಾದರು. ಇವರು ಸ್ವಸಹಾಯ ಗುಂಪಿನವರು. ಅವರೇ ಚರ್ಚೆ ಮಾಡಿ ಯೋಜನೆ ಹಾಕಿ ರಸ್ತೆ ದುರಸ್ತಿ ಮಾಡಲು ಮುಂದಾದರು. ಎರಡು ದಿನಗಳಲ್ಲಿ ರಸ್ತೆಯ ಹೊಂಡ-ಗುಂಡಿಗಳನ್ನು ತುಂಬಿಸಿದರು.

ಈ ಕೆಲಸ ಮಾಡಲು ಮಹಿಳೆಯರು ಇಲ್ಲಿನ ಪುರುಷರನ್ನು ಕೂಡ ಕಾಯಲಿಲ್ಲ. ಗ್ರಾಮದಲ್ಲಿ ಮೂರು ಮಹಿಳಾ ಸ್ವಸಹಾಯ ಗುಂಪುಗಳಿವೆ. ಪುರುಷರ ಸಹಾಯ ಕೇಳಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಮಹಿಳೆಯರೇ ಖುದ್ದಾಗಿ ನಿಂತು ಕೆಲಸ ಮಾಡಿ ರಸ್ತೆ ದುರಸ್ತಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT