ರಾಜ್ಯ

ಭಾರತ್ ಬಂದ್: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾರಾಮಾರಿ, ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿ

Raghavendra Adiga
ಉಡುಪಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು (ಸೆ. 10) ನಡೆಯುತ್ತಿರುವ ಭಾರತ್ ಬಂದ್ ವೇಳೆ ಉಡುಪಿ ನಗರದಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರನಡುವೆ ಮಾರಾಮಾರಿ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಘರ್ಷಣೆಯಲ್ಲಿ ತೊಡಗಿದ್ದು ಕಾನೂನು ಉಲ್ಲಂಘನೆಯಾಗುವ ಹಿನ್ನೆಲೆಯಲ್ಲಿ ನಗರದಾದ್ಯಂತ ನಾಳೆ ಬೆಳಿಗ್ಗೆವರೆವಿಗೆ ನಿಷೇಧಾಜ್ಞೆ 144 ಸೆಕ್ಷನ್) ಜಾರಿಗೊಳಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಆದೇಶ ಜಾರಿಗೊಳಿಸಿ ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ಆದೇಶಿಸಿದ್ದಾರೆ.
ಘರ್ಷಣೆ ವೇಳೆ ಬಿಜೆಪಿ ಮುಖಂಡ ಪ್ರಭಾಕರ್ ಪೂಜಾರಿ ಮೇಲೆ ಹಲ್ಲೆಯಾಗಿದೆ.ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.ಈ ಸಂದರ್ಭ ಪೋಲೀಸರು ಲಾಠಿಚಾರ್ಜ್ ಕೂಡ ನಡೆಸಿದ್ದಾರೆ.
ಉಡುಪಿಯ ಬನ್ನಂಜೆ ಸಮೀಪ ಬಿಜೆಪಿ ಮುಖಂಡ  ಪ್ರಭಾಕರ್ ಪೂಜಾರಿ ಮೇಲೆ ಹಲ್ಲೆ ನಡೆದಿದೆ.ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಗಡಿ ಮುಂಗಟ್ಟನ್ನು ಬಲವಂತಮಾವಿ ಮಿಚ್ಚಿಸಲು ಪ್ರಯತ್ನಿಸಿದ್ದಾರೆ.ಇದನ್ನು ತಡೆಯಲು ಮುಂದಾದಾಗ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
SCROLL FOR NEXT