ರಾಜ್ಯ

ಮಲ್ಪೆ ಬೀಚ್ ಗೆ ಸ್ಟಿಂಗ್ ರೇಗಳ ಪುನರಾಗಮನ; ಪ್ರವಾಸಿಗರಿಗೆ ಎಚ್ಚರಿಕೆ

Sumana Upadhyaya

ಉಡುಪಿ: ಮಲ್ಪೆ ಕಡಲತೀರದ ಸಮುದ್ರದ ಅಲೆಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಸೌಂದರ್ಯವನ್ನು ಸವಿಯಬೇಕೆಂದು ಎಲ್ಲರೂ ಆಸೆಪಡುತ್ತಾರೆ. ಆದರೆ ಈ ಸಮಯ ಸಮುದ್ರಕ್ಕೆ ಹೆಜ್ಜೆಯಿಡಲು ಸೂಕ್ತ ಸಮಯವಲ್ಲ. ಪ್ರವಾಸಿಗರು ಸಮುದ್ರದ ಅಲೆಯ ಸೌಂದರ್ಯ ಕಂಡು ಅಲ್ಲಿಗಿಳಿದರೆ ಸ್ಟಿಂಗ್ ರೇ ಎಂಬ ಜೀವಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ. ಇದು ಕಳೆದ ಶನಿವಾರದಿಂದ ಕಡಲ ಕಿನಾರೆಯಲ್ಲಿ ಈಜಾಡುತ್ತಿದೆ.

ಕಳೆದ ಶನಿವಾರ ಕಡಲ ಕಿನಾರೆಯಲ್ಲಿದ್ದ ನಾಲ್ವರು ಪ್ರವಾಸಿಗರಿಗೆ ಸ್ಟಿಂಗ್ ರೇ ಕಚ್ಚಿ ಗಾಯಗೊಳಿಸಿದೆ. ಹೀಗಾಗಿ ಇನ್ನು ಒಂದು ವಾರದವರೆಗಾದರೂ ಪ್ರವಾಸಿಗರು ಈ ಸಮುದ್ರದತ್ತ ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಮಲ್ಪೆ ಬೀಚ್ ನಲ್ಲಿ ಸ್ಟಿಂಗ್ ರೇಗಳ ಹಾವಳಿ ಹೆಚ್ಚಾಗುತ್ತಿದೆ.

ಕಳೆದ ಶನಿವಾರ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಮೂವರು ಮತ್ತು ಗುಜರಾತ್ ನ ಒಬ್ಬರಿಗೆ ಕಚ್ಚಿ ಗಾಯಗೊಳಿಸಿದೆ. ಇವರಿಗೆ ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಮಲ್ಪೆ ಬೀಚ್ ಗೆ ಹೋಗುವವರಿಗೆ ಪ್ರವಾಸಿಗರು ಎಚ್ಚರಿಕೆ ನೀಡುತ್ತಿರುವುದು ಕಂಡುಬರುತ್ತಿದೆ. ಆದರೂ ಕೂಡ ಕೆಲ ಪ್ರವಾಸಿಗರು ಇದನ್ನು ಲೆಕ್ಕಿಸದೆ ಸಮುದ್ರದ ಅಲೆಗಳಿಗೆ ಇಳಿಯುತ್ತಿದ್ದಾರೆ.

ಸಮುದ್ರದಲ್ಲಿ ಸ್ಟಿಂಗ್ ರೇ ಇರುವುದನ್ನು ಲೆಕ್ಕಿಸದೆ ಕೆಲವರು ತೀರಕ್ಕೆ ಆಡಲು ಹೋಗುತ್ತಾರೆ. ನಾವು ಅಪಾಯದ ರೇಖೆಯೆಂದು ಹಾಕಿದರೂ ಕೂಡ ಅದನ್ನು ಲೆಕ್ಕಿಸದೆ ದಾಟಿಕೊಂಡು ಹೋಗುತ್ತಾರೆ ಎಂದು ಇಲ್ಲಿನ ಭದ್ರತಾ ಸಿಬ್ಬಂದಿ ಹೇಳುತ್ತಾರೆ.

SCROLL FOR NEXT