ರಾಜ್ಯ

ಸೆಪ್ಟೆಂಬರ್ 3ನೇ ವಾರದವರೆಗೆ ರಾಜ್ಯದಲ್ಲಿ ತುಂತುರು ಮಳೆ: ಹವಾಮಾನ ಇಲಾಖೆ ವರದಿ

Sumana Upadhyaya

ಬೆಂಗಳೂರು: ಕೊಡಗು ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಕಳೆದ ತಿಂಗಳು ಸುರಿದಿದ್ದ ಪ್ರವಾಹ ಪೀಡಿತ ಮಳೆಯ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಇದುವರೆಗೆ ಕರ್ನಾಟಕದಲ್ಲಿ ತುಂತುರು ಮಳೆ ಸುರಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯ ಮಳೆಗಿಂತ 5ರಲ್ಲಿ ಒಂದನೇ ಭಾಗದಷ್ಟು ಮಳೆ ಇದುವರೆಗೆ ಸುರಿದಿದ್ದು ಮುಂದಿನ ವಾರದವರೆಗೆ ಒಣಹವೆ ಮುಂದುವರಿಯಲಿದೆ. ಆ ನಂತರ ಮಳೆ ಸ್ವಲ್ಪ ಮಟ್ಟಿಗೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.

ಒಣಹವೆಯಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದಿನ ಒಂದೆರಡು ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರಾಜ್ಯ ಉಸ್ತುವಾರಿ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ. ಮುಂದಿನ 8-10 ದಿನಗಳು ಮಾನ್ಸೂನ್ ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿ ಎಸ್ಎಸ್ ಎಂ ಗವಸ್ಕರ್, ಸೆಪ್ಟೆಂಬರ್ ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ರಾಜ್ಯದಲ್ಲಿ ಸುರಿದಿದೆ. ಶೇಕಡಾ 60ರಿಂದ 99ರಷ್ಟಕ್ಕಿಂತ ತೀರಾ ಕಡಿಮೆ ಮಳೆ ಸುರಿದಿದೆ ಎನ್ನುತ್ತಾರೆ ಅವರು.

ಜೂನ್ 1ರಿಂದ ಸೆಪ್ಟೆಂಬರ್ 10ರವರೆಗೆ ಉತ್ತರ ಒಳನಾಡಿನಲ್ಲಿ ಶೇಕಡಾ 33ರಷ್ಟು ಮಳೆ ಕೊರತೆಯಾಗಿದ್ದು ದಕ್ಷಿಣ ಒಳನಾಡಿನಲ್ಲಿ ಶೇಕಡಾ 14ರಷ್ಟು ಕೊರತೆಯಾಗಿದೆ.

SCROLL FOR NEXT