ರಾಜ್ಯ

ಹಂದಿಗಳ ವಿರುದ್ಧದ ಕಾರ್ಯಾಚರಣೆ ಅಂತ್ಯ: ಶಿವಮೊಗ್ಗದಿಂದ ಮದುರೈಗೆ ರವಾನೆ

Manjula VN
ಶಿವಮೊಗ್ಗ: ಶಿವಮೊಗ್ಗ ನಗರ ಪಾಲಿಕೆ ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ 250 ಹಂದಿಗಳನ್ನು ಸೆರೆ ಹಿಡಿದಿದ್ದು, ಸೆರೆಹಿಡಿದ ಹಂದಿಗಳನ್ನು ತಮಿಳುನಾಡಿನ ಮದುರೈಗೆ ಸೋಮವಾರ ಸ್ಥಳಾಂತರಿಸಿದ್ದಾರೆ. 
ಸ್ಥಳೀಯ ನಿವಾಸಿಗಳಿಗೆ ನೀಡಿದ್ದ ಭರವಸೆಯಂತೆಯೇ ಕಳೆದ 6 ತಿಂಗಳಿಂದ ನಗರ ಪಾಲಿಕೆ ಅಧಿಕಾರಿಗಳು ಹಂದಿಗಳ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿದ್ದರು. 
ಇದರಂತೆ ಪೊಲೀಸರ ರಕ್ಷಣೆ ಅಡಿಯಲ್ಲಿ ತಂಡಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸಿದರು. ಸೋಮವಾರ ಮಧ್ಯಾಹ್ನದವರೆಗೂ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು 250 ಹಂದಿಗಳನ್ನು ಸೆರೆ ಹಿಡಿದರು. ಇವುಗಳಲ್ಲಿ ಸಾಕಷ್ಟು ಹಂದಿಗಳನ್ನು ಕೆಎಸ್ಆರ್'ಟಿಸಿ ಬಸ್ ನಿಲ್ದಾಣ ಹಾಗೂ ನಗರ ರೈಲ್ವೇ ನಿಲ್ದಾಣಗಳಲ್ಲಿ ಹೆಚ್ಚು ಸೆರೆ ಹಿಡಿಯಲಾಗಿದೆ. 
ಶಿವಮೊಗ್ಗ ನಗರ ಪಾಲಿಕೆಯ ಪಶು ವೈದ್ಯೆ ರೇಖಾ ಅವರು ಮಾತನಾಡಿ, ಹಂದಿಗಳ ಸಾಕಾಣೆಗಾರರಿಂದ ಯಾವುದಾದರೂ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳ ಹಿನ್ನಲೆಯಲ್ಲಿ ಕಾರ್ಯಾಚರಣೆ ವೇಳೆ ಪೊಲೀಸರ ಸಹಾಯವನ್ನು ಕೇಳಲಾಗಿತ್ತು. ಕಾರ್ಯಾಚರಣೆ ವೇಳೆ ಹಣಗಳನ್ನು ತೆಗೆದುಕೊಳ್ಳಲಾಗಿಲ್ಲ. ಹಂದಿಗಳನ್ನು ಹಿಡಿಯಲಿ ಪಾಲಿಕೆ ಯಾವುದೇ ಹಣವನ್ನೂ ಪಡೆದಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT