ಕುಂದಾಪುರ: ಕುಂದಾಪುರ ಮೂಲದ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕ ಸುನಿಲ್ ಚಾತ್ರ(41) ಅವರು ಪ್ರಯಾಣಿಸುತ್ತಿದ್ದ ಪಜೆರೋ ಕಾರು ಶುಕ್ರವಾರ ಅಪಘಾತಕ್ಕಿಡಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮತಿ ವೆಲೂರ್ ಬೈಪಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಚಾಲಕ ಕೂಡ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಚಾತ್ರ ಅವರು ಪ್ರಯಾಣಿಸುತ್ತಿದ್ದ ಪಜೆರೋ ಎಸ್ ಯುವಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಸುನಿಲ್ ಚಾತ್ರ ಅವರು ಶ್ರೀ ದುರ್ಗಾಂಬ ಬಸ್ ಕಂಪನಿಯ ಮಾಲೀಕ ಸಚ್ಚಿದಾನಂದ ಅವರ ಪುತ್ರರಾಗಿದ್ದು, ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಸಹ ಮಾಲೀಕರಾಗಿದ್ದಾರೆ. ತಂದೆಯ ಮಾಲೀಕತ್ವದ ಈ ಟ್ರಾವೆಲ್ಸ್ ಅನ್ನು ಸಹೋದರನೊಂದಿಗೆ ನೋಡಿಕೊಳ್ಳುತ್ತಿದ್ದರು. ಮೃತ ಸುನೀಲ್ ಚಾತ್ರರು ವಿವಾಹಿತರಾಗಿದ್ದು. ಅವರ ಮೃತದೇಹ ಭಾನುವಾರದಂದು ಕುಂದಾಪುರ ತಲುಪಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.