ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ರೈತರಿಗೆ ಸಾಲ ವಸೂಲಾತಿ ನೋಟಿಸ್ ಕಳುಹಿಸಬೇಡಿ: ಬ್ಯಾಂಕ್ ಗಳಿಗೆ ಸಿಎಂ ಸೂಚನೆ

ರೈತರಿಗೆ ಯಾವುದೇ ರೀತಿಯ ವಸೂಲಾತಿ ನೋಟಿಸ್ ನೀಡಿ ಕಿರುಕುಳ ನೀಡಬಾರದೆಂದು ಬ್ಯಾಂಕ್ ಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ...

ಎಚ್.ಡಿ ಕುಮಾರ ಸ್ವಾಮಿ
Shilpa D
Updated On : 16 Sept 2018, 10:52 am
ಬೆಂಗಳೂರು: ರೈತರಿಗೆ ಯಾವುದೇ ರೀತಿಯ ವಸೂಲಾತಿ ನೋಟಿಸ್ ನೀಡಿ ಕಿರುಕುಳ ನೀಡಬಾರದೆಂದು ಬ್ಯಾಂಕ್ ಗಳಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಸೂಚನೆ ನೀಡಿದ್ದಾರೆ. 
ಸರ್ಕಾರ ಎಲ್ಲಾ ರಾಷ್ಚ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ., 
ನಾಲ್ಕು ಕಂತುಗಳಲ್ಲಿ ವಾಣಿಜ್ಯ ಬ್ಯಾಂಕ್ ಗಳ 35 ಸಾವಿರ ಕೋಟಿ ರು ಸಾಲ ಮನ್ನಾ ಮಾಡುವುದಾಗಿ ನಿರ್ಧರಿಸಿದ್ದೆವು, ಆದರೆ ಈಗ ಮುಂದಿನ ಜುಲೈ ಒಳಗೆ ಸಾಲ ಕ್ಲಿಯರ್ ಮಾಡಲು ಅಗತ್ಯ ವಿರುವ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ, 

Advertisement

Advertisement

ರೈತರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಬ್ಯಾಂಕ್ ಗಳಿಗೆ ಸಿಎಂ ಸೂಚನೆ ನೀಡಿದ್ದಾರೆ,ರಾಜ್ಯದ ಹಣಕಾಸು ಸ್ಥಿತಿ ಸುಭದ್ರವಾಗಿದ್ದು, ಸಾಲಮನ್ನಾ ಯೋಜನೆಯಿಂದ ರಾಜ್ಯ ಸರ್ಕಾರದ ಇತರೆ ಕಾರ್ಯಕ್ರಮಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಹಣ ವಾಪಸ್ ನೀಡುವಂತೆ ರೈತರಿಗೆ ಒತ್ತಡ ಹಾಕದಂತೆ ಜಿಲ್ಲಾಡಳಿತಗಳು ಬ್ಯಾಂಕ್ ಮ್ಯಾನೇಜರ್ ಗಳಿಗೆ ತಿಳಿಸಿವೆ.  ಕಮರ್ಷಿಯಲ್ ಹಾಗೂ ಸಹಕಾರ ಬ್ಯಾಂಕ್ ಗಳ 2 ಲಕ್ಷ ರು ವರೆಗಿನ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದ ಬಳಿಕವೂ ಹಲವು ಬ್ಯಾಂಕ್ ಗಳು ರೈತರಿಗೆ ನೊಟೀಸ್ ಕಳುಹಿಸಿದ್ದವು, ಸಾಲದ ಭಯದಿಂದಾಗಿ ವಿಜಯಾಪುರದ ಹಲವು ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement