ಅಂತರಾಷ್ಟ್ರೀಯ ಕ್ರೀಡಾಪಟು ಸುಲತಾ ಕಾಮತ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಉಡುಪಿ: ಅಂತರಾಷ್ಟ್ರೀಯ ಮಟ್ಟದ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ದೇಶಕ್ಕೆ ಗೌರವ ತಂದುಕೊಟ್ಟ ಸುಲತಾ ಕಾಮತ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಕಟಪಾಡಿಯ ಎನ್.ಹೆಚ್ 66 ರ ಸಮೀಪ ಸುಲತಾ ಅವರು ಟೀ ಅಂಗಡಿಯನ್ನು ನಡೆಸುತ್ತಿದ್ದು, ನಿನ್ನೆ ಬೆಳಗಿನ ಜಾವ 3.30ರ ಸುಮಾರಿಗೆ ಬಂದಿರುವ ದುಷ್ಕರ್ಮಿಗಳು ಆಮ್ಲೆಟ್ ಮಾಡಿಕೊಂಡುವಂತೆ ತಿಳಿಸಿದ್ದಾರೆ. ಈ ವೇಳೆ ಆಗುವುದಿಲ್ಲ ಎಂದು ತಿಳಿಸಿದಾಗ ಮೀನುಗಾರನಾಗಿರುವ ಆರೋಪಿ ಚರಣ್ ಕುಂದರ್ ಎಂಬಾತ ಕಲ್ಲಿನಿಂದ ಸುಲತಾ ಅವರ ಮುಖದ ಮೇಲೆ ಹೊಡೆದಿದ್ದಾರೆ. ಬಲಿಕ ಮತ್ತೊಬ್ಬ ಆರೋಪಿ ದೀಕ್ಷಿತ್ ಎಂಬಾತ ಕೈಯಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಆರೋಪಿಗಳು ಅಂಗಡಿಗೆ ಪ್ರತೀನಿತ್ಯ ಬರುತ್ತಿದ್ದ ಗ್ರಾಹಕರಾಗಿದ್ದು, ಒಬ್ಬ ರೌಡಿ ಎಂದು ಸುಲತಾ ಅವರು ಹೇಳಿದ್ದಾರೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರವ ಸುಲತಾ ಅವರ ಪತಿ, ಪುತ್ರ ಹಾಗೂ ಪುತ್ರಿ ಘಟನೆಗೆ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ಸುಲತಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಅಲ್ಲದೆ, ಕುಟುಂಬದವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆಂದು ಸುಲತಾ ಅವರು ಆರೋಪಿಸಿದ್ದಾರೆ.