ರಾಜ್ಯ

ಕೊಡಗು ಪ್ರವಾಹದಲ್ಲಿ ಆರೋಗ್ಯ ಕೇಂದ್ರಗಳ ಹಾನಿಯಿಂದ ಆದ ನಷ್ಟ ಅಂದಾಜು 4.47 ಕೋಟಿ ರೂ.

Sumana Upadhyaya

ಬೆಂಗಳೂರು: ಕಳೆದ ತಿಂಗಳು ಕೊಡಗು ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ರಾಜ್ಯ ಆರೋಗ್ಯ ಇಲಾಖೆಗೆ 5.47 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಸುಮಾರು 67 ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಭಾಗಶಃ ಹಾನಿಗೀಡಾಗಿವೆ. ಕೊಡಗು ಜಿಲ್ಲೆಯಲ್ಲಿ 196 ಉಪ ಕೇಂದ್ರಗಳು, 30 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಏಳು ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಎರಡು ತಾಲ್ಲೂಕು ಆಸ್ಪತ್ರೆಗಳಿವೆ. 67 ಕೇಂದ್ರಗಳ ಛಾವಣಿ ಮತ್ತು ವಿದ್ಯುತ್ ತಂತಿಗಳು ಹಾನಿಗೀಡಾಗಿವೆ.

ನಮ್ಮ ಮುಖ್ಯ ಎಂಜಿನಿಯರ್ ಕೊಡಗು ಜಿಲ್ಲೆಯ ಪ್ರವಾಹದಲ್ಲಿ ಹಾನಿಗೀಡಾದ ಆರೋಗ್ಯ ಕೇಂದ್ರಗಳನ್ನು ಪರಿಶೀಲಿಸಿದ್ದು ಇನ್ನು ಎಷ್ಟು ಸಮಯದಲ್ಲಿ ದುರಸ್ತಿ ಮಾಡಿ ಪೂರ್ಣ ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ವೈದ್ಯರು, ಆಶಾ ಕಾರ್ಯಕರ್ತರು ಮತ್ತು ಇಲಾಖೆಯ ದಾದಿಯರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಜನತೆ ಹಿತದೃಷ್ಟಿಯಿಂದ ಆರೋಗ್ಯ ಕೇಂದ್ರಗಳನ್ನು ತುರ್ತು ದುರಸ್ತಿ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಆರೋಗ್ಯ ಸೌಲಭ್ಯ ಮತ್ತು ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ, ಸರ್ಕಾರ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರ್ಗಿಹಳ್ಳಿ.

SCROLL FOR NEXT