ಕೆ.ಬಿ ಕೋಳಿವಾಡ 
ರಾಜ್ಯ

ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ್ ಹೆಸರಿಡಲು ಸಾಧ್ಯವಿಲ್ಲ!

ಮಾಜಿ ಸ್ಪೀಕರ್ ಕೆ,ಬಿ ಕೋಳಿವಾಡ್ ಹೆಸರು ಅವರ ಬೆಂಬಲಿಗರ ಅಳುವಿಗೆ ಕಾರಣವಾಗಿದೆ, ಹಾವೇರಿಯಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾ ಪಂಚಾಯತ್ ....

ಬೆಂಗಳೂರು: ಮಾಜಿ ಸ್ಪೀಕರ್ ಕೆ,ಬಿ ಕೋಳಿವಾಡ್ ಹೆಸರು ಅವರ ಬೆಂಬಲಿಗರ ಅಳುವಿಗೆ ಕಾರಣವಾಗಿದೆ, ಹಾವೇರಿಯಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಕೋಳಿವಾಡ ಭವನ ಎಂದು ಹೆಸರಿಡುವುದಕ್ಕೆ ಪಂಚಾಯತ್ ಸದಸ್ಯರು ನಿರ್ಧರಿಸಿದ್ದರು, ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಾ ರಾಜ್ ಅಧಿಕಾರಿಗಳು ಈ ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ.
ಹಾವೇರಿ ಜಿಲ್ಲಾ ಪಂಚಾಯತ್ ಸದಸ್ಯರು ಈ ಸಂಬಂಧ ಎರಡು ಸಲ ನಿರ್ಣಯ ಕೈಗೊಂಡಿದ್ದರು, ಮೇ 2017 ಮತ್ತು ಅಕ್ಟೋಬರ್ 2017 ರಂದು ನಿರ್ಣಯ ಪಾಸು ಮಾಡಿದ್ದರು. ಸರ್ಕಾರಿ ಅಸ್ತಿಗಳಿಗೆ  ಚುನಾಯಿತ ಪ್ರತಿನಿಧಿಗಳ ಹೆಸರು ಇಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪಂಚಾಯತ್ ಸಿಇಓ  ಹೇಳಿದ್ದಾರೆ, 1993ರ ಪಂಚಾಯತ್ ರಾಜ್ ಕಾಯಿದೆ ಪ್ರಕಾರ ಬದುಕಿರುವವರ ಹೆಸರನ್ನು ಇಡಲು ಅವಕಾಶವಿಲ್ಲ ಎಂದು ಹೇಳಿದೆ.
ಜಿಲ್ಲಾ ಪಂಚಾಯತ್ ಅಧಿಕಾರಿಗಳ ಈ ನಿರ್ಧಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೋಳಿವಾಜ ಹಿಂಬಾಲಕರಿಗೆ ಬೇಸರ ತರಿಸಿದೆ,  ಆದರೆ ಇದೆಲ್ಲಾ ವಿರೋಧಿ ಬಣದ ಶಾಸಕರ ಷಡ್ಯಂತ್ರ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಟ್ಟಡವೊಂದಕ್ಕೆ ಮಾಜಿ ಸಚಿವ ಸಿಎಂ ಉದಾಸಿ ಅವರ ಹೆಸರನ್ನು ಇಡಲಾಗಿದೆ. ಕಳೆದ ಚುನಾವಣೆಯಲ್ಲಿ  ಕೆ.ಬಿ ಕೋಳಿವಾಡ ಸೋತಿದ್ದಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.
ಮೊದಲು ಜಿಲ್ಲಾ ಪಂಚಾಯತ್ ಸದಸ್ಯರು ನಿರ್ಣಯ ಪಾಸು ಮಾಡಿದ್ದರು. ಅದನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು, ಅದಾದ ನಂತರ ಅನುಮೋದನೆ ಸಿಕ್ಕಿತು, ಆದರೆ ಈ ವೇಳೆ ಒಬ್ಬ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದರು, ನನ್ನ ಹೆಸರನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದರು, ನನ್ನ ಹೆಸರನ್ನು ತೆಗೆದು ಹಾಕಲಾಯಿತು, ಆದರೆ ಉದಾಸಿ ಅವರ ಹೆಸರನ್ನು ತೆಗದು ಹಾಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ