ಸಾಂದರ್ಭಿಕ ಚಿತ್ರ 
ರಾಜ್ಯ

ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ದುರಸ್ತಿ: ಮಂಗಳೂರು ರೈಲು ಅಕ್ಟೋಬರ್ ವರೆಗೆ ರದ್ದು

ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ...

ಬೆಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್ 29ರವರೆಗೆ ಬೆಂಗಳೂರು-ಮಂಗಳೂರು ಮಧ್ಯೆ ರೈಲ್ವೆ ಸಂಚಾರ ಭಾಗಶಃ ಹಲವು ದಿನಗಳಂದು ರದ್ದಾಗಲಿದೆ.

ಕೆಂಪೇಗೌಡ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ -ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16511/16513 ರೈಲು ಅಕ್ಟೋಬರ್ 28ರವರೆಗೆ, ಕೆಎಸ್ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16517/ 16523 ಅಕ್ಟೋಬರ್ 25ರವರೆಗೆ, ಕಣ್ಣೂರು/ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 16512/16524 ಅಕ್ಟೋಬರ್ 29ರವರೆಗೆ ಸಂಚಾರ ರದ್ದಾಗಲಿದೆ.

ಜನ್ಸಧರನ್ ವಿಶೇಷ ರೈಲು ಸಂಖ್ಯೆ 06515 ಯಶವಂತಪುರದಿಂದ ಹಾಸನದವರೆಗೆ ಅಕ್ಟೋಬರ್ 22 ಮತ್ತು 29ರಂದು, ಜನ್ಸಧರನ್ ವಿಶೇಷ ರೈಲು ಸಂಖ್ಯೆ 06576 ಹಾಸನದಿಂದ ಯಶವಂತಪುರದವರೆಗೆ ಅಕ್ಟೋಬರ್ 23ರಂದು ಸಂಚರಿಸಲಿದೆ.
ಮೈಸೂರು ವಿಭಾಗಗದಲ್ಲಿ ಸಸಲು ಎಂಬಲ್ಲಿ ಹಳಿಯ ಅಗಲು ಹೆಚ್ಚಳ ಮಾಡುವ ಕೆಲಸ ನಡೆಯುತ್ತಿರುವುದರಿಂದ ಕೆಲವು ರೈಲುಗಳು ಭಾಗಶಃ ರದ್ದಾಗಲಿವೆ.

ಜೋಧುಪುರ-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 16507, 56274 ಹುಬ್ಬಳ್ಳಿ-ಅರಸೀಕೆರೆ ಪ್ಯಾಸೆಂಜರ್ ರೈಲು ಸಂಖ್ಯೆ 56274 ಮತ್ತು ಚಿತ್ರದುರ್ಗ-ಹರಿಹರ ಪ್ಯಾಸೆಂಜರ್ ರೈಲು ಸಂಖ್ಯೆ 56517 ಅಕ್ಟೋಬರ್ 28ರಂದು 25 ನಿಮಿಷಗಳ ಕಾಲ ವಿಳಂಬವಾಗಲಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಅಧಿಕಾರಿ ಇ ವಿಜಯ, ಸಕಲೇಶಪುರದವರೆಗೆ ಪ್ರಯಾಣಿಕರು ರೈಲಿನಲ್ಲಿ ಹೋಗಲು ಯಾವುದೇ ಅಡ್ಡಿಯಿಲ್ಲ, ಅಲ್ಲಿಯವರೆಗೆ ರೈಲಿನಲ್ಲಿ ಸಂಚರಿಸಿ ಅಲ್ಲಿಂದ ಪ್ರಯಾಣಿಕರು ಬೇರೆ ಸಂಚಾರ ವಾಹನಗಳನ್ನು ಬಳಸಬೇಕಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT