ಬೆಂಗಳೂರು: ನಗರವನ್ನು ಸಮಸ್ಯೆಗಳಿಂದ ಮುಕ್ತಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಂಡು ಬೆಂಗಳೂರನ್ನು ಮತ್ತೆ ಟ್ರ್ಯಾಕ್'ಗೆ ತರುವಂತೆ ಬೆಂಗಳೂರು ನಗರದಲ್ಲಿ, ಬೃಹತ್ ನೀರುಗಾಲುವೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನದ ವೇಳೆ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ನಡುವೆ ಸಮನ್ವಯತ ಸಾಧಿಸಲು ರಚಿಸಿರುವ ಸಮಿತಿಗೆ ಹೈಕೋರ್ಟ್ ಸೋಮವಾರ ಸೂಚಿಸಿದೆ.
ನಗರದಲ್ಲಿ ಮಳೆ ನೀರು ಕಾಲುವೆ ಅಸಮರ್ಪಕ ನಿರ್ವಹವಣೆಯ ಕುರಿತು ಸಿಟಿಜನ್ ಆ್ಯಕ್ಷನ್ ಗ್ರೂಪ್ ಮತ್ತು ಜೆಪಿ. ನಗರ 4ನೇ ಹಂತದ ಹಾಗೂ ಡಾಲರ್ಸ್ ಲೈ ಔಟ್ ನಿವಾಸಿಗಳ ಸಂಘ ಪ್ರತ್ಯೇಕವಾಗಿ ಸಲ್ಲಿಸಿದ್ದ ಸಾರ್ಜಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆಯನ್ನು ನೀಡಿದೆ.
ವಿವಿಧ ಕಾಮಗಾರಿಗಳ ಅನುಷ್ಠಾನದ ವೇಳೆ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಸಮಿತಿ ಇಂದೇ (ಬುಧವಾರ) ಸಭೆ ನಡೆಸುವಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ನ್ಯಾಯಾಲಯ ನಿರ್ದೇಶಿಸಿದೆ.
ರಸ್ತೆ ನಿರ್ವಹಣೆ ವಿಚಾರದಲ್ಲಿ ಎಳ್ಲಾ ಸರ್ಕಾರ ಹಾಗೂ ಅದರ ಅಧೀನದ ಎಲ್ಲಾ ನಾಗರೀಕ ಸೌಲಭ್ಯ ಸೇವಾ ಸಂಸ್ಥೆಗಳ ಸಭೆ ನಡೆಸಲು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ 2015ರ ಜುಲೈನಲ್ಲಿ ಹೈಕೋರ್ಟ್ ಹೊರಡಿಸಿರುವ ಮತ್ತು ಬೆಂಗಳೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಸಮಯದಲ್ಲಿ ಉದ್ಭವಿಸುವ ಸಮಸ್ಯೆಗಲನ್ನು ಪರಿಹರಿಸಲು ವಿವಿಧ ಇಲಾಖೆ, ಸಂಸ್ಥೆಗಳ ನಡುವೆ ಸಮನ್ವಯ ಸಮತಿ ಸಾಧಿಸಲುಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ ಮಾಡಿರುವುದನ್ನು ಮುಖ್ಯ ನ್ಯಾಯಮೂರ್ತಿಗಳು ಗಮನಿಸಿದರು.
ನಂತರ ಎರಡೂ ಸಮಿತಿಗಳ ಬಗ್ಗೆ ಸರ್ಕಾರ ಹಾಗೂ ಬಿಬಿಎಂಪಿ ವಕೀಲರಿಂದ ವಿವರಣೆ ಕೇಳಿದ ಅವರು, ಸಿಲಿಕಾನ್ ಸಿಟಿ ಸದಾ ಸ್ವಚ್ಛವಾಗಿರಬೇಕು. ಬೇರೆ ಬೇರೆ ಇಲಾಖೆಯಿಂದ ಸಹಾಯ ಪಡೆದು ಸಮಸ್ಯೆ ಬಗೆಹರಿಸಬೇಕು. ಹೀಗಾಗಿ ಈ ಕುರಿತು ವಿವರಣೆ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ನ್ಯಾಯಾಲಯಕ್ಕೆ ಬರಲು ಹೇಳುವಂತೆ ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿದರು.
ಸಾಧ್ಯವಾದರೆ ಸಮಿತಿಯು ತೆಗೆದುಕೊಂಡಿರುವ ಕ್ರಮಗಳ ಕುರಿತು ದಾಖಲೆಯೊಂದಿಗೆ ಬರಲು ಮಾಹಿತಿ ನೀಡುವಂತೆಯೂ ಸೂಚಿಸಿದರು.
ಅದರಂತೆ ವಿಚಾರಣೆಗೆ ಹಾಜರಾದ ವಿಜಯ ಭಾಸ್ಕರ್ ಅವರು, ರಾಜಕಾಲುವೆ ವಿಚಾರವಲ್ಲದೇ ನಗರದ ಎಲ್ಲಾ ಸಮಸ್ಯೆಗಳ ಕುರಿತು ಗಮನ ಹರಿಸಲಾಗುತ್ತಿದೆ. ತಮ್ಮ ನೇತೃತ್ವದ ಸಮಿತಿಯು ತಿಂಗಳಿಗೆ ಎರಡು ಬಾರಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ.
ಸಮಸ್ಯೆಗಳ ಕುರಿತು ಪರಿಹಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ವಚ್ಛ ನಗರವನ್ನಾಗಿ ಮಾಡಲು ಸಮಿತಿ ಅಗತ್ಯ ಕ್ರಮ ಜರುಗಿಸುತ್ತಿದೆ ಎಂದು ನ್ಯಾಯಾಲಯಕಗ್ಕೆ ಹೇಳಿಕೆ ನೀಡಿದರು.
ಹಿರಿಯ ವಕೀಲ ಆದಿತ್ಯ ಸೋಂದಿ ಅವರನ್ನು ಸಮಿತಿಗೆ ಸ್ವತಂತ್ರ ಸದಸ್ಯರಾಗಿ ನೇಮಿಸಿ ಆದೇಶಿಸಿದರು. ಜೊತೆಗೆ ನಾಳೆಯೇ ಈ ಸಮಿತಿ ಸಬೆ ನಡೆಸಬೇಕೆಂದೂ ನಿರ್ದೇಶಿಸಿದರು.