ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: 2 ಸಾವಿರ ಕೋಟಿ ರು. ಮೌಲ್ಯದ ಬೃಹತ್ ಜಿಎಸ್‌ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ

ದೇಶದಲ್ಲೇ ಬೃಹತ್ ಜಿಎಸ್‌ಟಿ ಹಗರಣವೊಂದು ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 2000 ಕೋಟಿ ರೂ. ಮೌಲ್ಯದ ಹಗರಣವನ್ನು ಬೆಂಗಳೂರಿನ.....

ಬೆಂಗಳೂರು: ದೇಶದಲ್ಲೇ ಬೃಹತ್ ಜಿಎಸ್‌ಟಿ ಹಗರಣವೊಂದು ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 2000 ಕೋಟಿ ರೂ. ಮೌಲ್ಯದ ಹಗರಣವನ್ನು ಬೆಂಗಳೂರಿನ ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದು ವಂಚಕ ವಿಕ್ರಮ್ ದುಗಾಲ್ ಎನ್ನುವವನನ್ನು ಬಂಧಿಸಿದ್ದಾರೆ.
ದುಗಾಲ್ ನಕಲಿ ಬಿಲ್ ಗಳನ್ನು ಸೃಷ್ಟಿಸುವ ಮೂಲಕ ಸುಮಾರು ಎರಡು ಸಾವಿರ ಕೋಟಿ ಮೊತ್ತದ ಸರಕು ಸೇವಾ ತೆರಿಗೆಗಳನ್ನು ವಂಚಿಸಿದ್ದನೆನ್ನಲಾಗಿದೆ.
ಬೆಂಗಳೂರಿನ  ಟಿ.ದಾಸರಹಳ್ಳಿ, ಚಿಕ್ಕ ಬಾಣಾವಾರ ಸೇರಿ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು ಹಲವು ದಾಖಲೆ, ಕಡತ ಹಾಗೂ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದಿದ್ದಾರೆ.ದಾಳಿ ಸಮಯದಲ್ಲಿ ಸುಮಾರು 203 ಕೋಟಿ ರು. ಮೊತ್ತದ ತೆರಿಗೆ ವಂಚನೆ ಮಾಡಿರುವ ನಕಲಿ ಬಿಲ್ ಸಹ ಪತ್ತೆಯಾಗಿದೆ.
ಬಂಧಿತ ಆರೋಪಿಯಾದ ದುಗಾಲ್ ಎರಡು ಸಂಸ್ಥೆಗಳನ್ನು ನಡೆಸುತ್ತಿದ್ದು ಈತನ ಕಛೇರಿ ಹಾಗೂ ಮನೆಯಲ್ಲಿ ಒಟ್ಟು 14  ಸಂಸ್ಥೆಗಳಿಗೆ ಸೇರಿದ ನಕಲಿ ಬಿಲ್ ಗಳು ಪತ್ತೆಯಾಗಿದೆ. ಎಂದರೆ ದುಗಾಲ್ ಬೇರೆಯವರ ಹೆಸರಲ್ಲಿ ಬರೋಬ್ಬರಿ 12 ಸಂಸ್ಸ್ಥೆಗಳನ್ನು ನಡೆಸುತ್ತಿದ್ದರೆನ್ನುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ದೇಶದಲ್ಲಿ ಕಳೆದ ವರ್ಷದಿಂದ ಜಾರಿಗೆ ಬಂದಿರುವ ನೂತನ ಸರಕು ಸೇವಾ ತೆರಿಗೆ ಪದ್ದತಿಯ್ತಿಂದ ದೇಶದ ಯಾವುದೇ ಮೂಲೆಯಲ್ಲಿದ್ದು ಒಮ್ಮೆ ತೆರಿಗೆ ಫಾವತಿಸಿದರೆ ಆ ವಸ್ತುಗಳನ್ನು ದೇಶದ ಇನ್ನಾವುದೇ  ಮೂಲೆಗೆ ಸಾಗಿಸಲು ಅವಕಾಶವಿದೆ. ಆದರೆ ವ್ಯಾಪಾರಸ್ಥರು, ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಇಂತಹಾ ತೆರಿಗೆ ಪದ್ದತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವದು ಇದೀಗ ಬೆಳಕಿಗೆ ಬಂದಿದ್ದು ದೇಶದಲ್ಲಿ ಇದು ಭಾರೀ ದೊಡ್ಡ ಜಿಎಸ್‌ಟಿ ವಂಚನೆ ಪ್ರಕರಣ ಆಗಿರುವುದುಆಗಿ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT