ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಕಾಂಗ್ರೆಸ್ ನಾಯಕನ ಹತ್ಯೆ ಆರೋಪಿಗಳ ಮೇಲೆ ಪೋಲೀಸ್ ಫೈರಿಂಗ್!

ಬೆಂಗಳೂರಿನಲ್ಲಿ ನಡೆದ ಯುವ ಕಾಂಗ್ರೆಸ್ ಮುಖಂಡನ ಕೊಲೆ ಆರೋಪಿಗಳ ಮೇಲೆ ಪೋಲೀಸರು ಫೈರಿಂಗ್ ನಡೆಸಿದ್ದಾರೆ. ಹತ್ಯೆ ಆರೋಪಿಗಳ ಬಂಧನಕ್ಕೆ ಮುನ್ನ ಅವರ ಮೇಲೆ ಫೈರಿಂಗ್ ನಡೆದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಯುವ ಕಾಂಗ್ರೆಸ್ ಮುಖಂಡನ ಕೊಲೆ ಆರೋಪಿಗಳ ಮೇಲೆ ಪೋಲೀಸರು ಫೈರಿಂಗ್ ನಡೆಸಿದ್ದಾರೆ. ಹತ್ಯೆ ಆರೋಪಿಗಳ ಬಂಧನಕ್ಕೆ ಮುನ್ನ ಅವರ ಮೇಲೆ ಫೈರಿಂಗ್ ನಡೆದಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ದೊಡ್ಡಜಾಲ ಸಮೀಪ ಪೋಲೀಸರ ಮೇಲೆ ಹಲ್ಲೆಗೆ ಮುಂದಾದ ಹತ್ಯೆ ಆರೋಪಿ ಮನೋಜ್ ಅಲಿಯಾಸ್ ಕೆಂಚ ಮತ್ತು ಮಂಜೇಗೌಡ ಅವರುಗಳ ಮೇಲೆ ಪೋಲೀಸರು ಆತ್ಮರಕ್ಷಣಾ ಗುಂಡಿನ ದಾಳಿ ನಡೆಸಿದ್ದಾರೆ.
ಅಳ್ಳಾಲ ಸಂದ್ರದ ಕಾಂಗ್ರೆಸ್‌ ಯುವ ನಾಯಕ ಅರುಣ್‌ ಹತ್ಯೆ ನಡೆಸಿದ ಆರೋಪಿಗಳ ಸುಳಿವು ಖಚಿತಪಡಿಸಿಕೊಂಡಿದ್ದ ವಿದ್ಯಾರಣ್ಯಪುರ ಹಾಗೂ ಯಲಹಂಕ ಪೋಲೀಸರು ಬುಧವಾರ ಬೆಳಿಗ್ಗೆ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಆ ವೇಳೆಗೆ ಆರೋಪಿಗಳು ಮಾರಕಾಸ್ತ್ರಗಳಿಂದ ಪೋಲೀಸರ ಮೇಲೆ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ.
ಆರೋಪಿ ಮನೋಜ್ ಕಾಲಿಗೆ ಗುಂಡು ತಗುಲಿದ್ದು ಸಧ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.ಇನ್ನೊಬ್ಬ ಆರೋಪಿಯ ಕಾಲಿಗೆ ಸಹ ಗಾಯವಾಗಿದ್ದು ಆತನೂ ಕೂಡ ಆಸ್ಪತ್ರೆಗ ದಾಖಲಾಗಿದ್ದಾನೆ.
ಯಲಹಂಕದ ಬ್ಲಾಕ್ ಕಾಂಗ್ರೆಸ್ ನ ಯುವ ಮುಖಂಡನಾಗಿದ್ದ ಅರುಣ್ (27) ನಗರದ ಅಲ್ಲಾಳಸಂದ್ರ ಸಮೀಪ ಭಾನುವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದರು.ಫೈನಾನ್ಸ್ ವ್ಯವಹಾರ ಸಂಬಂಧ ಈ ಹತ್ಯೆ ನಡೆದಿದೆ ಎನ್ನಳಾಗಿದ್ದು ಘಟನೆ ಕುರಿತಂತೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ