ರಾಜ್ಯ

ಸಂಗೀತ ನಿರ್ದೇಶಕ ಇಳಯರಾಜ ವಿರುದ್ಧ ಕೇಸ್ ದಾಖಲಿಸಿದ ಕ್ರೈಸ್ತ ಸಂಘಟನೆ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ

Srinivas Rao BV
ಬೆಂಗಳೂರು: ಸಂಗೀತ ದಿಗ್ಗಜ ಇಳಯರಾಜಾ ಅವರ ವಿರುದ್ಧ ಕ್ರೈಸ್ತ ಸಂಘಟನೆಯೊಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ದಾಖಲಿಸಿದೆ. 
ಜೀಸಸ್ ಕ್ರೈಸ್ಟ್ ಹಾಗೂ ರಮಣ ಮಹರ್ಷಿಗಳನ್ನು ಹೋಲಿಕೆ ಮಾಡಿದ್ದಕ್ಕಾಗಿ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಕ್ರೈಸ್ತ ಸಂಘಟನೆಯ ಮುಖ್ಯಸ್ಥರಾಗಿರುವ ಅಶೋಕ್ ಅರೋಕಿಸಾಮಿ, ಇಳಯ ರಾಜ ವಿರುದ್ಧ ಪ್ರಕರಣ ದಾಖಲಿಸಿದ್ದು, "ಗೂಗಲ್ ಮುಖ್ಯಕಚೆರಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಳಯರಾಜ, ಜೀಸಸ್ ಮರುಹುಟ್ಟನ್ನು ಅನುಭವಿಸಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ರಮಣ ಮಹರ್ಷಿಗಳು ಮಾತ್ರ ತಮ್ಮ 16 ನೇ ವಯಸ್ಸಿನಲ್ಲಿ ಸಾವನ್ನು ಅನುಭವಿಸಿ ಬಂದಿರುವುದು ಸತ್ಯ ಎಂದು ಹೇಳಿದ್ದರು.  ಇಳಯರಾಜ ಅವರ ಈ ಹೇಳಿಕೆ ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ತಮ್ಮ ಹೇಳಿಕೆ ಮೂಲಕ ಇಳಯರಾಜ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ, ಸೆಕ್ಷನ್.295 ರ ಅಡಿಯಲ್ಲಿ ಇದು ಅಪರಾಧವಾಗಲಿದ್ದು ಮಾನನಷ್ಟ ಮೊಕದ್ದಮೆ ದಾಖಲಿಸಲು ಅರ್ಹವಾಗಿದೆ ಎಂದು ಹೇಳಿದ್ದಾರೆ. .
ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಅ.09ಕ್ಕೆ ಮುಂದಿನ ವಿಚಾರಣೇ ನಡೆಸಲಿದೆ.  ಕ್ಷಮೆ ಕೋರುವವರೆಗೆ ಇಳಯರಾಜ ಅವರನ್ನು ಬಿಡುವುದಿಲ್ಲ ಎಂದು ಅಶೋಕ್ ಅರೋಕಿಸಾಮಿ ಹೇಳಿದ್ದಾರೆ. 
SCROLL FOR NEXT