ರಾಜ್ಯ

ಬಂಟ್ವಾಳದಲ್ಲಿ ಗುಹೆ ನಾಶ; ಕೇಸರಿ ಧ್ವಜ ಪತ್ತೆ, ಪೊಲೀಸ್ ಸಿಬ್ಬಂದಿ ನಿಯೋಜನೆ

Sumana Upadhyaya

ಮಂಗಳೂರು: ಬಂಟ್ವಾಳ ಸಮೀಪ  ಚರ್ಚ್ ಹತ್ತಿರವಿದ್ದ ಗುಹೆಯೊಂದನ್ನು ದುಷ್ಕರ್ಮಿಗಳು  ನಾಶ ಮಾಡಿದ್ದರಿಂದ ಉದ್ವಿಗ್ನ ಸ್ಥಿತಿ ಉಂಟಾಗಬಹುದೆಂಬ ಆತಂಕದಲ್ಲಿ ಬಂಟ್ವಾಳ ಸುತ್ತಮುತ್ತ ತೀವ್ರ ಭದ್ರತೆ ಏರ್ಪಡಿಸಲಾಗಿದೆ. 40 ವರ್ಷಗಳ ಹಳೆಯ ಗುಹೆಯಲ್ಲಿ ಕೇಸರಿ ಧ್ವಜ ಕಂಡುಬಂದಿದೆ.

ಪೊಲೀಸರಿಗೆ ಮಾಹಿತಿ ಸಿಕ್ಕಿದ ಕೂಡಲೇ ನಿನ್ನೆ ಬೆಳಗ್ಗೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಹೋಗಿ ತಪಾಸಣೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ನಾಡು ಸಮೀಪ ವಿಟ್ಲದ ವಿಜಯಡ್ಕ ಚರ್ಚ್ ಗೆ ಸೇರಿದ ಗುಹೆಯಾಗಿದ್ದು ಅದನ್ನು ರಾತ್ರೋರಾತ್ರಿ ನಾಶ ಮಾಡಲಾಗಿದೆ. ಗುಹೆಯ ಮೇಲೆ ಬಂಡೆಯಲ್ಲಿದ್ದ ಮದರ್ ಮೇರಿಯ ಮೂರ್ತಿಯನ್ನು ಸಂಪೂರ್ಣ ನಾಶ ಮಾಡಿ ಅದರ ಜಾಗದಲ್ಲಿ ಸಣ್ಣದ ಕಲ್ಲನ್ನಿಟ್ಟು ಊದುಬತ್ತಿ ಹಚ್ಚಲಾಗಿತ್ತು. ಅದರ ಸುತ್ತ ಕೇಸರಿ ಬಣ್ಣದ ಧ್ವಜವನ್ನು ಅಡಲಾಗಿದೆ.

ಈ ಘಟನೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಕನಿಷ್ಠ 20 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿಟ್ಲ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯಲ್ಲಪ್ಪ ತಿಳಿಸಿದ್ದಾರೆ.

SCROLL FOR NEXT