ರಾಜ್ಯ

ಇನ್ನು ಮುಂದೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಡೈರಿ ವ್ಯವಸ್ಥೆ ಜಾರಿ

Sumana Upadhyaya

ಬೆಂಗಳೂರು: ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳ ಸಮನಾಗಿ ತರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರತಿದಿನ ಡೈರಿ ವ್ಯವಸ್ಥೆಯನ್ನು ತರಲು ನಿರ್ಧರಿಸಿದೆ.
ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಶಾಲೆಯ ವಿಷಯಗಳು ಏನಾದರೂ ಇದ್ದರೆ ಅದನ್ನು ಡೈರಿಯಲ್ಲಿ ಬರೆದು ಮಕ್ಕಳಿಗೆ ಮನೆಗೆ ಕಳುಹಿಸುತ್ತಾರೆ. ಪೋಷಕರು ಮತ್ತು ಶಿಕ್ಷಕರ ನಡುವಿನ ಸಂಪರ್ಕ ಮತ್ತು ಸಂವಾದವನ್ನು ಹೆಚ್ಚಿಸಲು ಇದರ ಉದ್ದೇಶವಾಗಿದೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ತನ್ವೀರ್ ಸೇಠ್ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದರೂ ಕೂಡ ಇಂದಿನ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಡೈರಿ ವ್ಯವಸ್ಥೆ ಜಾರಿಗೆ ಬರಲಿದೆ.

ಈ ವ್ಯವಸ್ಥೆ ಜಾರಿಗೆ ಬಂದರೆ ಪೋಷಕರು ಮತ್ತು ಶಿಕ್ಷಕರ ನಡುವೆ ಇನ್ನು ಮುಂದೆ ಡೈರಿ ಮೂಲಕವೇ ಸಂವಹನ ಪ್ರತಿನಿತ್ಯವೆಂಬಂತೆ ನಡೆಯಲಿದೆ. ಪೋಷಕರಿಗೆ ಏನಾದರೂ ಶಾಲೆಗೆ ಸಂಬಂಧಿಸಿದ ವಿಷಯಗಳನ್ನು ಡೈರಿಯಲ್ಲಿ ಬರೆದು ಕಳುಹಿಸುತ್ತಾರೆ. ಇದನ್ನು ನೋಡಿ ಪೋಷಕರು ಡೈರಿಯಲ್ಲಿ ಸಹಿ ಮಾಡಿ ಕಳುಹಿಸಬೇಕು ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

SCROLL FOR NEXT