ಬೆಂಗಳೂರು: ಶನಿವಾರ ತಡರಾತ್ರಿ ಬೆಂಗಳುರಿನ ಪ್ರತಿಷ್ಠಿತ ವಿಲ್ಸನ್ ಗಾರ್ಡನ್ ಕ್ಲಬ್ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಕಡೆ ಸಿಸಿಬಿ ಪೋಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಗದನ್ನು ವಶಕ್ಕೆ ಪಡೆದಿದ್ದಲ್ಲದೆ 44 ಜನರನ್ನು ಬಂಧಿಸಿದ್ದಾರೆ.
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಪುನಃಅ ನೇಮಕವಾಗಿದ್ದು ಸಿಸಿಬಿ ಪೋಲೀಸ್ ಇಲಾಖೆಯ ಅಧಿಕಾರಿಗಳು ಮೈ ಚಳಿ ಬಿತ್ಟು ಕಾರ್ಯರಂಗಕ್ಕೆ ಇಳಿದಿದ್ದಾರೆ.
ನಗರದ ವಿಲ್ಸನ್ ಗಾರ್ಡನ್ ಕ್ಲಬ್ ಮೇಲೆ ದಾಳಿ ನಡೆಸಿ 44 ಜನರನ್ನು ವಶಕ್ಕೆ ಪಡೆದಿರುವ ಓಲೀಸರು 18.92 ಲಕ್ಷ ರು. ಜಪ್ತಿ ಮಾಡಿದ್ದಾರೆ.
ಶುಕ್ರವಾರದಿಂದ ಪ್ರಾರಂಭವಾಗಿರುವ ಅನಧಿಕೃತ ಪಬ್, ಬಾರ್ ಗಳ ಮೇಲಿನ ದಾಲಿ ಶನಿವಾರ ಸಹ ಮುಂದುವರಿದಿತ್ತು.ರಾತ್ರಿ ಇಡೀ ಕಾರ್ಯಾಚರಣೆ ನಡೆಸಿರುವ ಪೋಲೀಸ್ ತಂಡ ಬೆಂಗಳೂರಿನ ಪ್ರತಿಷ್ಠಿತ ತಾಣಗಳಾದ ಮೆಜೆಸ್ಟಿಕ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾ ನಗರ ಸೇರಿ ಅನೇಕ ಕಡೆ ರೇಡ್ ಮಾಡಿದೆ.
ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಈ ದಾಳಿ ನಡೆಇದ್ದು ನಗರದಲ್ಲಿನ ಅಕ್ರಮ ಚಟ್ವಟಿಕೆಗಳನ್ನು ತಹಬಂದಿಗೆ ತರಲು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.