ಬೆಂಗಳೂರು: ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾಹಿರಾತುಗಳ ಮೂಲಕ ಅರಿವು ಮೂಡಿಸುತ್ತಿದ್ದರೆ ಇತ್ತ ಬೈಕ್ ಸವಾರನೊಬ್ಬ ಸಿಗ್ನಲ್ ಜಂಪ್ ಮಾಡು ಇಲ್ಲದಿದ್ದರೆ ನಿನ್ನನ್ನು ರೇಪ್ ಮಾಡ್ತೀನಿ ಅಂತ ಮಹಿಳೆಗೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
40 ವರ್ಷದ ವ್ಯಕ್ತಿಯೊಬ್ಬ ಸಿಗ್ನಲ್ ಜಂಪ್ ಮಾಡು ಇಲ್ಲದಿದ್ದರೆ ನಿನ್ನನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು 26 ವರ್ಷದ ಫೋಟೋಗ್ರಾಫರ್ ಮಹಿಳೆ ಆರೋಪಿಸಿದ್ದಾರೆ.
ಬೆಂಗಳೂರಿನ ತಿಲಕನಗರದ ಬಿಲಾಲ್ ಮಸೀದಿ ಬಳಿಯ ಸಿಗ್ನಲ್ ಬಳಿ ರೆಡ್ ಲೈಟ್ ಬಿದ್ದಿದ್ದರಿಂದ ಮಹಿಳೆ ತಮ್ಮ ಕಾರ ಅನ್ನು ನಿಲ್ಲಿಸಿದ್ದಾರೆ. ಈ ವೇಳೆ ಹಿಂದೆ ಬೈಕ್ ನಲ್ಲಿದ್ದ ವ್ಯಕ್ತಿ ಜೋರಾಗಿ ಹಾರನ್ ಮಾಡುತ್ತಾ ಸಿಗ್ನಲ್ ಜಂಪ್ ಮಾಡುವಂತೆ ಕೂಗಿದ್ದಾನೆ. ಆದರೆ ಮಹಿಳೆ ಸಿಗ್ನಲ್ ಜಂಪ್ ಮಾಡುವುದಿಲ್ಲ ಎಂದು ತಿಳಿದು ಸುಮ್ಮನಾಗಿದ್ದಾನೆ.
ನಂತರ ನಾನು ರೆಡ್ಡಿ ಆಸ್ಪತ್ರೆ ಕಡೆಗೆ ಹೋಗುತ್ತಿದ್ದಾಗ ಹಿಂದೆ ಫಾಲೋ ಮಾಡಿಕೊಂಡು ಬಂದು ಕಾರನ್ನು ಅಡ್ಡಗಟ್ಟಿ ಬೈಕ್ ಸವಾರ ನನಗೆ ಅತ್ಯಾಚಾರ ಮಾಡುವ ಬೆದರಿಕೆ ಹಾಕಿದ. ಅಲ್ಲದೆ ಪಕ್ಕಕ್ಕೆ ನಡಿ ಹೇಗೆ ರೇಪ್ ಮಾಡ್ತೀನಿ ಅಂತಾ ತೋರಿಸುತ್ತೇನೆ ಎಂದು ಹೇಳಿದ ಎಂದು ಮಹಿಳೆ ಹೇಳಿದ್ದಾಳೆ.
ಇದೇ ವೇಳೆ ತಮ್ಮ ಕಾರಿನಲ್ಲಿ ಕ್ಯಾಮೆರಾದಿಂದ ಮಹಿಳೆ ಆತನ ಬೈಕ್ ನ ಪೋಟೋ ತೆಗೆದುಕೊಂಡಿದ್ದು ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.