ರಾಜ್ಯ

ಬ್ಯಾಂಕಿನವರು ರೈತರಿಗೆ ನೋಟಿಸ್ ನೀಡಿದರೆ ಮ್ಯಾನೇಜರ್‌ ಅರೆಸ್ಟ್‌: ಸಿಎಂ ಕುಮಾರಸ್ವಾಮಿ ಎಚ್ಚರಿಕೆ

Srinivasamurthy VN
ಬೆಂಗಳೂರು: ಸಾಲ ನೀಡಿದ ಬ್ಯಾಂಕಿನವರು ಸಾಲ ತೀರಿಸುವಂತೆ ನೋಟೀಸ್ ನೀಡಿದರೆ ಅಂಥಹ ಬ್ಯಾಂಕ್ ಮ್ಯಾನೇಜರ್ ಅನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಡಳಿತದಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ನೀಡಿದ ಸಾಲ ಹಿಂಪಡೆಯಲು ಯಾವುದೇ ಬ್ಯಾಂಕ್ ಅಧಿಕಾರಿಗಳು ರೈತರ ಮೇಲೆ ಒತ್ತಡ ಹೇರಿದರೆ, ಅಂತಹ ಬ್ಯಾಂಕ್ ನ ಮ್ಯಾನೇಜರ್ ಅನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಅಂತೆಯೇ 'ರೈತರ ಸಾಲಮನ್ನಾ ಹಿನ್ನೆಲೆ ಯಾವುದೇ ಅನುದಾನ ಕಡಿತ ಮಾಡಿಲ್ಲ. ಸಾಲ ಮನ್ನಾಗೂ ರಾಜ್ಯದ ಅಭಿವೃದ್ಧಿಗೂ ಸಂಬಂಧ ಇಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಅತ್ಯಂತ ಕಡಿಮೆ ಬೆಲೆಗೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಇತ್ತೀಚೆಗೆ ಮಂಡ್ಯದಲ್ಲಿ ನಡೆದಿದ್ದ ರೈತ ಕುಟುಂಬದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿಗದ ಎಚ್ ಡಿಕೆ, 'ಮೊನ್ನೆ ಮಂಡ್ಯದಲ್ಲಿ ರೈತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತ್ತು. ಜನತಾ ದರ್ಶನಕ್ಕೆ ಬಂದು ಅರ್ಜಿ ಕೊಟ್ಟಿದ್ದ. ದನಗಳನ್ನು ಮನಸ್ಸಿಗೆ ಬಂದ ದರದಲ್ಲಿ ಖರೀಧಿಸಿ ,ನಂತರ ಮಾರುವುದು ಆತನ ಚಟ. ಆ ವ್ಯಕ್ತಿಗೂ ಸಹ ತಾಳ್ಮೆಯಿಂದ ಇರುವಂತೆ ಹೇಳಿದ್ದೆ. ಆತನಿಗೆ ಸಾಲಗಾರರು ತೊಂದರೆ ಕೊಡದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಯೂ ಕೊಟ್ಟಿದ್ದೆ. ಆದರೆ ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ನಿನ್ನೆ ವಿಧಾನಸೌಧದಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ರೈತನ ಬಗ್ಗೆ ವರದಿಯಾಗಿದೆ. ಆ ಯುವಕನಿಗೆ ಫಿಡ್ಸ್ ಕಾಯಿಲೆ ಇತ್ತು. ಖಾಸಗಿಯವರಿಂದ ಸಾಲ ಮಾಡಿಕೊಂಡಿದ್ದಾನೆ. ಆ ಸಾಲವನ್ನು ನನಗೆ ತೀರಿಸಬೇಕು ಎಂದು ಕೇಳುತ್ತಾನೆ. ಪ್ರತಿದಿನ ಹೀಗೆ ಸಾಲ ಮಾಡಿಕೊಂಡು ಹತ್ತಾರು ಜನ ನನ್ನ ಬಳಿಗೆ ಬಂದರೆ ನಾನು ಅವರ ಎಲ್ಲ ಸಾಲ ತೀರಿಸಲು ಸಾಧ್ಯವೇ. ಅದಕ್ಕಾಗಿಯೇ ನಾವು ಋಣಮುಕ್ತ ಕಾಯ್ದೆ ಜಾರಿಗೊಳಿಸುತ್ತಿರುವುದು. ರಾಷ್ಟ್ರಪತಿ ಅಂಕಿತ ಆಗಿ ಕಾಯ್ದೆ ಜಾರಿಗೆ ಬರುವವರೆಗೆ ತಾಳ್ಮೆಯಿಂದ ಕಾಯಬೇಕು ಎಂದು ತಿಳಿಸಿದರು.
SCROLL FOR NEXT