ಬೆಂಗಳೂರು: ಉದ್ಯಮಿಯೊಬ್ಬರು ತನ್ನ ಪತ್ನಿ ಹಾಗೂ ತಾನೇ ಸಾಕಿದ್ದ ನಾಯಿಯನ್ನು ಕೊಂದು ಬಳಿಕ ತಾನೂ ಅಪಾರ್ಟ್ ಮೆಂಟ್ ನ ನಾಲ್ಕನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಗಳವಾರ ನಡೆದಿದೆ.
ಇಂದು ಬೆಳಗ್ಗೆ ಸದಾಶಿವನಗರದ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಅತುಲ್ ಉಪಾಧ್ಯಾಯ(60) ಎಂಬ ಉದ್ಯಮಿ ತಮ್ಮ ಪತ್ನಿ ಮಮತಾ ಉಪಾಧ್ಯಾಯ(50) ಅವರನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಮತಾ ಉಪಾಧ್ಯಾಯ ಅವರನ್ನು ಮನೆಯಲ್ಲಿಯೇ ನಾಯಿ ಚೈನ್ ನಿಂದ ಹತ್ಯೆ ಮಾಡಿದ್ದು, ಬಳಿಕ ತನ್ನ ಮನೆಯ ನಾಯಿಯನ್ನು ಕೆಳಗೆ ಎಸೆದು, ತಾನು ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್ ಮೆಂಟ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಮಮತಾ ಕ್ಯಾನ್ಸರ್ ಅಂತಿಮ ಹಂತದಲ್ಲಿತ್ತು. ಆದರೆ ದಂಪತಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ ಎಂದು ತಿಳಿಸಲಾಗಿದೆ.
ಅತುಲ್ ಉಪಾಧ್ಯಾಯ ದಂಪತಿಗೆ ಮಕ್ಕಳಿರಲಿಲ್ಲ. ಆದರೆ ಕಾನೂನು ವಿದ್ಯಾರ್ಥಿಯಾಗಿರುವ ಅತುಲ್ ಸಹೋದರನ ಪುತ್ರ ಅವರೊಂದಿಗೆ ವಾಸಿಸುತ್ತಿದ್ದರು. ಇದು ಬೆಳಗ್ಗೆ ಆತ ಕಾಲೇಜ್ ಹೋದ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics