ಸಾಂಧರ್ಬಿಕ ಚಿತ್ರ 
ರಾಜ್ಯ

ಪತ್ನಿಗೆ ನಾಯಿಯಿಂದ ಸಂಭೋಗ ಮಾಡಿಸಿದ್ದ ಪತಿ, ಅಪರಾಧಿ ಎಂದ ಕೋರ್ಟ್, ನಾಳೆ ಶಿಕ್ಷೆ ಪ್ರಮಾಣ!

ಪತ್ನಿಯೊಂದಿಗೆ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದುದ್ದಲ್ಲದೇ, ನಾಯಿಯೊಂದಿಗೆ ಸಂಭೋಗ ಮಾಡಿಸಿದ್ದ ವ್ಯಕ್ತಿಯನ್ನು ಕೋರ್ಟ್ ಅಪರಾಧಿ ಎಂದು ತೀರ್ಮಾನಿಸಿದೆ.

ಬೆಳಗಾವಿ: ಪತ್ನಿಯೊಂದಿಗೆ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದುದ್ದಲ್ಲದೇ, ನಾಯಿಯೊಂದಿಗೆ ಸಂಭೋಗ ಮಾಡಿಸಿದ್ದ ವ್ಯಕ್ತಿಯನ್ನು ಕೋರ್ಟ್ ಅಪರಾಧಿ ಎಂದು ತೀರ್ಮಾನಿಸಿದೆ.
ಈ ಕುರಿತು ಪತ್ರಿಕೆಯೊಂದು ವರದಿ ಮಾಡಿದ್ದು, ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ಕಟಕೋಳ ಠಾಣೆ ವ್ಯಾಪ್ತಿಯಲ್ಲಿ 2017ರ ಮಾರ್ಚ್ 22ರಂದು ಘಟನೆ ನಡೆದಿತ್ತು. ಮೂಲಗಳ ಪ್ರಕಾರ 2010ರಲ್ಲಿ ಮದುವೆಯಾಗಿದ್ದ ವ್ಯಕ್ತಿ 2015ರಿಂದ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಈ ಕುರಿತು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಲ್ಲಿ ಆತ 'ನಾನು ಹೇಳಿದಂತೆ ಕೇಳಬೇಕು. ಇಲ್ಲವಾದಲ್ಲಿ ಮನೆ ಬಿಟ್ಟು ಹೋಗು' ಎಂದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದ ಎಂದು ಆಕೆ ತನ್ನ ಅಳಲು ತೋಡಿಕೊಂಡಿದ್ದಾಳೆ,
'2016ರ ಡಿಸೆಂಬರ್‌ನಿಂದ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಮಲಗಿರುತ್ತಿದ್ದ ಪತ್ನಿಯನ್ನು ಎಬ್ಬಿಸಿ, ಮೊಬೈಲ್ ನಲ್ಲಿ ಅನೈಸರ್ಗಿಕ ವಿಡಿಯೊಗಳನ್ನು ತೋರಿಸಿ, ನೀನು ಈ ವಿಡಿಯೊದಲ್ಲಿದ್ದ ಹಾಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದು ಪೀಡಿಸುತ್ತಿದ್ದ. ಇದಕ್ಕೆ ವಿರೋಧಿಸುತ್ತಿದ್ದ ಪತ್ನಿಗೆ ಜೀವ ಬೆದರಿಕೆ ಹಾಕಿ, ವಿಕೃತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಪಕ್ಕದ ಮನೆಯಲ್ಲಿದ್ದ 5-6 ತಿಂಗಳಿನ ನಾಯಿಮರಿ ತೆಗೆದುಕೊಂಡು ಬಂದು, ನಾಯಿಯ ಶಿಶ್ನವನ್ನು ಕೈಯಿಂದ ಪತ್ನಿಯ ಗುಪ್ತಾಂಗದೊಳಗೆ ಒತ್ತಾಯಪೂರ್ವಕವಾಗಿ ಹಾಕಿದ್ದ. 15 ದಿನಗಳಲ್ಲಿ 3 ಬಾರಿ ನಾಯಿ ಮರಿಯಿಂದ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿಸಿದ್ದ’ ಎಂದು ಆಕೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾಳೆ.
ಅಷ್ಟು ಮಾತ್ರವಲ್ಲದೇ, '2017ರ ಮಾರ್ಚ್‌ 22ರ ರಾತ್ರಿ ಮತ್ತೆ ನಾಯಿ ತಂದಿದ್ದ. ನಾಯಿಯೊಂದಿಗೆ ಮಲಗಿದರೆ ಮಾತ್ರ ಮನೆಯಲ್ಲಿರು, ಇಲ್ಲದಿದ್ದರೆ ಹೋಗು ಎಂದು ಹಲ್ಲೆ ನಡೆಸಿದ್ದ. ಒಪ್ಪದಿದ್ದಾಗ ಮೂವರು ಮಕ್ಕಳೊಂದಿಗೆ ಪತ್ನಿಯನ್ನು ರಾತ್ರೋರಾತ್ರಿ ಹೊರಹಾಕಿದ್ದ. ನಂತರ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. 
ವಿಕೃತಕಾಮಿ ಅಪರಾಧಿ ಎಂದು ಕೋರ್ಟ್ ತೀರ್ಪು
ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕಟಕೋಳ ಠಾಣೆ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಕೂಡ ಸಲ್ಲಿಸಿದ್ದರು. ಸರ್ಕಾರದ ಪರವಾಗಿ 8ನೇ ಸರ್ಕಾರಿ ಅಭಿಯೋಜಕ ಕಿರಣ ಎಸ್. ಪಾಟೀಲ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ 8ನೇ ಹೆಚ್ಚುವರಿ ಮತ್ತು ಸತ್ರ ಜಿಲ್ಲಾ ನ್ಯಾಯಾಧೀಶ ವಿ.ಬಿ. ಸೂರ್ಯವಂಶಿ ಆತನನ್ನು ಅಪರಾಧಿ ಎಂದು ತೀರ್ಮಾನಿಸಿ ತೀರ್ಪು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!