ರಾಜ್ಯ

ಟಿಕ್ ಟಾಕ್ ಆಪ್ ಹೊಸ ರೀತಿಯ ವ್ಯಸನ: ತಜ್ಞರ ಎಚ್ಚರಿಕೆ

Srinivas Rao BV
ಬೆಂಗಳೂರು: ಸ್ಮಾರ್ಟ್ ಫೋನ್ ನಲ್ಲಿ ಟಿಕ್ ಟಾಕ್ ಆಪ್ ಯುವಜನತೆ ಹೊಸ ರೀತಿಯ ವ್ಯಸನವಾಗಿ ಕಾಡುತ್ತಿದೆ.
ಮಕ್ಕಳು ಹಾಗೂ ಯುವ ಸಮೂಹದ ಮೇಲೆ ಟಿಕ್ ಟಾಕ್ ವ್ಯಾಸನದ ರೀತಿಯಲ್ಲಿ ಪರಿಣಾಮ ಬೀರುತ್ತಿರುವುದರ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 
ಟಿಕ್ ಟಾಕ್ ನಲ್ಲಿ ಹಲವು ಹಂತಗಳ ಚಾಲೆಂಜ್ ಇದ್ದು, ಉಡುಪುಗಳ ಪದರಗಳನ್ನು ತೆಗೆದುಹಾಕುವುದು, ಅಥವಾ ಮೇಕ್ ಅಪ್ ನ್ನು ತೆಗೆಯುವುದು ಸೇರಿದಂತೆ ಬಳಕೆದಾರರು  ಅಸಮಂಜಸ ರೀತಿಯಲ್ಲಿ ವಿಡಿಯೋ ತೆಗೆಯುವುದಕ್ಕೆ ಪ್ರೇರೇಪಿಸುತ್ತದೆ. ಇಂತಹ ವಿಚಿತ್ರ ಚಾಲೆಂಜ್ ಗಳಿಗೆ 13-15 ವರ್ಷದ ಯುವಜನತೆ ಬಲಿಯಾಗುತ್ತಿದ್ದು ಕೆಲವೊಮ್ಮೆ ಈ ರೀತಿಯ ಅಸಮಂಜಸ ವಿಡಿಯೋಗಳು ಲೈಂಗಿಕ ವ್ಯಸನಿಗಳ ಕೈಗೂ ಸಿಲುಕಬಹುದು ಎಂದು ಫೋರ್ಟಿಸ್ ಆಸ್ಪತ್ರೆಯ ಹರೆಯದ ಮನೋವೈದ್ಯರಾಗಿರುವ ಡಾ.ಮೇಘಾ ಮಹಾಜನ್ ಹೇಳಿದ್ದಾರೆ.  ಹರೆಯದ ಯುವಕರು ನಿಜ ಜೀವನದಲ್ಲಿರುವ ಸ್ನೇಹಿತರಿಗಿಂತಲೂ ಈ ರೀತಿಯ ಆಪ್, ಸಾಮಾಜಿಕ ಜಾಲತಾಣದಲ್ಲಿರುವ ಸ್ನೇಹಿತರ ಸಂಖ್ಯೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಓದಿನತ್ತ ಹೆಚ್ಚು ಗಮನ ಹರಿಸುವುದಿಲ್ಲ. ಈ ಕಾರಣಗಳಿಂದಾಗಿಯೇ ಭಾರತದಲ್ಲಿ ಟಿಕ್ ಟಾಕ್ ನ್ನು ನಿಷೇಧಿಸಲು ಪೋಷಕರು ಒತ್ತಡ ಹೇರುತ್ತಿದ್ದಾರೆ ಎನ್ನುತ್ತಾರೆ ಡಾ.ಮೇಘಾ ಮಹಾಜನ್
ಆದರೆ ಟಿಕ್ ಟಾಕ್ ನ್ನು ನಿಷೇಧಿಸಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲವಂತೆ. ಏಕೆಂದರೆ ಟಿಕ್ ಟಾಕ್ ನ್ನು ನಿಷೇಧಿಸಿದರೆ ಇದೇ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತೊಂದು ಆಪ್ ಬರಬಹುದು. ಬದಲಾಗಿ ಮಕ್ಕಳು ಯಾವ ಆಪ್ ಗಳನ್ನು ಡೌನ್ ಲೋಡ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ಎಚ್ಚರದಿಂದ ಇರಬೇಕೆಂಬುದು ಹಾಗೂ ಈ ರೀತಿಯ ಆಪ್ ಗಳಿಂದ ಉಂಟಾಗಬಹುದಾದ ಅಪಾಯವನ್ನು ಮಕ್ಕಳಿಗೆ ವಿವರಿಸಬೇಕು, ಅತಿ ಚಿಕ್ಕ ವಯಸ್ಸಿಗೆ ಮಕ್ಕಳ ಕೈಗೆ ಆನ್ ಲೈನ್ ಗೆ ಸಂಬಂಧಪಟ್ಟ ಅಂಶಗಳು ಸಿಗಬಾರದು ಎಂಬುದು ತಜ್ಞರ ಸಲಹೆ.  
SCROLL FOR NEXT