ರಾಜ್ಯ

ಬೆಂಗಳೂರು: ಚಿಕ್ಕದಾಗಿರಲಿದೆ ನಮ್ಮ ಮೊಟ್ರೋ ಎರಡನೇ ಹಂತದ ಅಂಡರ್ ಗ್ರೌಂಡ್ ನಿಲ್ದಾಣಗಳು

Raghavendra Adiga
ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ 12 ಭೂಗತ (ಅಂಡರ್ ಗ್ರೌಂಡ್) ನಿಲ್ದಾಣಗಳಿರಲಿದೆ. ಆದರೆ ಒಂದನೇ ಹಂತದ ನಿಲ್ದಾಣಗಳಿಗೆ ಹೋಲಿಸಿದರೆ ಈ ನಿಲ್ದಾಣಗಳ ವ್ಯಾಪ್ತಿ ಸಣ್ಣದಾಗಿದೆ. ಆದರೆ ಈ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಕರ್ಯಗಳಿಗೆ ಸಂಬಂಧಿಸಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು  ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಅಧಿಕಾರಿಗಳು ಹೇಳಿದ್ದಾರೆ.
 72.1 ಕಿಮೀದೂರದ ಮೆಟ್ರೋ ಎರಡನೇ ಹಂತದ ಅಂಡರ್ ಗ್ರೌಡ್ ಕಾರಿಡಾರ್ ಕಾಮಗಾರಿ ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ ನಡೆಯುತ್ತಿದೆ. ಬಂಬೂ ಬಜಾರ್,  ಪಾಟರಿ ರಸ್ತೆ, ಶಿವಾಜಿ ನಗರ, ಎಂಜಿ ರಸ್ತೆ, ವೆಲ್ಲರ್ ಜಂಕ್ಷನ್, ಡೈರಿ ಸರ್ಕಲ್,  ಮೈಕೋ ಲೇಔಟ್, ಲ್ಯಾಂಗ್ಫೋರ್ಡ್ ಜಂಕ್ಷನ್, ಟ್ಯಾನಿರಿ ರಸ್ತೆ, ವೆಂಕಟೇಶಪುರ, ಅರೆಬಿಕ್ ಕಾಲೇಜು ಹಾಗೂ ನಾಗವಾರಗಳು ಈ ಮಾರ್ಗದ ಅಂಡರ್ ಗ್ರೌಂಡ್ ನಿಲ್ದಾಣಗಳಗಿದೆ.
"ಈ ನಿಲ್ದಾಣಗಳನ್ನು 210 ಮೀ. ಉದ್ದವಾಗಿ ನಿರ್ಮಿಸಲಾಗುತ್ತಿದೆ.ಅಂಡರ್ ಗ್ರೌಂಡ್ ನಿಲ್ದಾಣಗಳಲ್ಲಿ ಪ್ರಸ್ತುತ 24 ಮೀಟರ್ ಅಗಲ ವ್ಯಾಪ್ತಿಯನ್ನು ಕಾಯ್ದುಕೊಳ್ಲಲಾಗುತ್ತಿದೆ." ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊದಲನೇ ಹಂತದ ಐದು ಅಂಡರ್ ಗ್ರೌಂಡ್ ನಿಲ್ದಾಣಗಳಲ್ಲಿ  ಕಬ್ಬನ್ ಪಾರ್ಕ್, ವಿಧಾನ ಸೌಧ, ಸರ್ ಎಂ ವಿಶ್ವೇಶ್ವರಯ, ಕೆಎಸ್ಆರ್ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಮೆಟ್ರೋ ಸ್ಟೇಷನ್ ಸೇರಿವೆ.  ಇದು  272 ಮೀಟರ್ ಉದ್ದ ಮತ್ತು 24 ಮೀಟರ್ ಅಗಲ ಹೊಂದಿದೆ. ಆದಾಗ್ಯೂ, ಚಿಕ್ಕಪೇಟೆ,  ಕೆಆರ್ ಮಾರುಕಟ್ಟೆ ನಿಲ್ದಾಣಗಳು  240 ಮೀಟರ್ ಉದ್ದವಾಗಿದೆ.
ನಿಲ್ದಾಣಗಳಲ್ಲಿ ಎಲ್ಲಾ ಸೌಲಭ್ಯಗಳೂ ಇರಲಿದೆ.ಎನ್ನುವುದನ್ನು ಖಾತ್ರಿಪಡಿಸ;ಉಅಂಡರ್ ಗ್ರೌಂಡ್ ನಿಲ್ದಾಣಗಳಲ್ಲಿ ಅಸ್ತಿತ್ವದಲ್ಲಿರುವ ಕಛೇರಿ ಪ್ರದೇಶದಲ್ಲಿ ಮುಕ್ತ ಸ್ಥಳವನ್ನು  ಬಂದ್ ಮಾಡುತ್ತೇವೆ.. "ಒಮ್ಮೆ, ಒಬ್ಬ ಪ್ರಯಾಣಿಕ ಮೊದಲನೇ ಹಂತದ ನಿಲ್ದಾಣ ಪ್ರವೇಶಿಸುತ್ತಾನೆ. ಆತ ಕೆಳಗಿನ ಪ್ಲಾಟ್ ಫಾರಂ ಅನ್ನು ಮೇಲಿನಿಂದಲೇ ನೋಡಲು ಸಾಧ್ಯವಿದೆ. ಆದರೆ ಎರಡನೇ ಹಂತದಲ್ಲಿ ಹೀಗೆ ನೋಡುವುದಕ್ಕೆ ಸಾಧ್ಯವಿಲ್ಲ. ಇದನ್ನು ಬಂದ್ ಮಾಡಲಾಗುತ್ತದೆ.ಇದರ ಬದಲಿಗೆ ಅಲ್ಲಿ ಸಾರ್ವಜನಿಕ ಸೌಲಭ್ಯ ಕೇಂದ್ರಗಳಿರಲಿದೆ.
ಸಣ್ಣ ನಿಲ್ದಾಣಗಳನ್ನು ನಿರ್ಮಿಸುವ ಹಿಂದಿನ ಕಾರಣಗಳು, ಅವರು ವಿವರಿಸುತ್ತಾ ಮೊದಲ ಹಂತದಲ್ಲಿ ನಿಲ್ದಾಣಗಳಿಗೆ ಸ್ವಾಧೀನಪಡಿಸಿಕೊಂಡಿರುವ ಹೆಚ್ಚಿನ ಭೂಮಿ ಸರ್ಕಾರಿ ಭೂಮಿಯಾಗಿತ್ತು. ಎರಡನೇ ಹಂತದಲ್ಲಿ , ಹೆಚ್ಚಿನ ಭೂಮಿ ಖಾಸಗಿ ಭೂಮಿಯಾಗಿದೆ. ಇನ್ನು ಎರಡನೇ ಹಂತದಲ್ಲಿ ಪ್ರತಿ ನಿಲ್ದಾಣದಲ್ಲಿ ಕೇವಲ ಎರಡು ದ್ವಾರಗಳಿರಲಿದೆ. ಪ್ರಯಾಣಿಕರ ಸಂಚಾರವನ್ನು ನಿರ್ವಹಿಸಲು ಎರಡು ದ್ವಾರಫ಼್ಗಳು ಸಾಕಾಗಲಿದೆ.ಈಗಾಗಲೇ ಅಸ್ತಿತ್ವದಲ್ಲಿರುವ ನಿಲ್ದಾನಗಳಲ್ಲಿ ಸಹ ಕೆಲವು ಕಳಪೆ ನಿರ್ವಹಣೆ ಕಾರಣದಿಂದಾಗಿ ಮುಚ್ಚಲ್ಪಟ್ಟಿದೆ.ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ  ಮಾತ್ರವೇ ನಾವು ನಾಲ್ಕು ದ್ವಾರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಮಳೆ ನೀರು ಅಥವಾ ಬೇರೆ ಬಗೆಯ ಜಲ ನಿಲ್ದಾಣ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗುವುದ್ ಎಂದು ಅಧಿಕಾರಿಗಳು ಹೇಳಿದ್ದಾರೆ.
SCROLL FOR NEXT