ಬೆಂಗಳೂರು: ವಿಧಾನಸೌಧದ ಸಮೀಪ ಶಾಸಕರ ಭವನದ ಐದನೇ ಮಹಡಿಯಿಂದ ಬಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಇದು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತಂತೆ ಪೋಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ.
ಮೃತನನ್ನು ಲಾಲ್ ಬಾಗ್ ರಸ್ತೆಯ ಚಿಕ್ಕಮಾವಳ್ಳಿ ನಿವಾಸಿ ಶಿವಶಂಕರ್ (53) ಎಂದು ಗುರುತಿಸಲಾಗಿದೆ. ಕಳೆದ 18 ವರ್ಷಗಳಿಂದ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಭಾಗಿಲಕ್ಷ್ಮಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.
ಶಿವಶಂಕರ್ ಬೆಳಿಗ್ಗೆ 10ರ ವೇಳೆಗೆ ಮನೆ ಬಿಟ್ಟಿದ್ದು ಮಧ್ಯಾಹ್ನ 2.30ಕ್ಕೆ ಈ ಘಟನೆ ನಡೆಇದೆ. ಅವರು ಶಾಸಕರ ಭವನದ ಐದನೇ ಮಹಡಿಯಲ್ಲಿ ಎಲಿವೇಟರ್ ನಲ್ಲಿದ್ದರು. ಅದೇ ವೇಳೆ ಮೆಟ್ಟಿಲಿನಿಂದ ನೆಲಕ್ಕೆ ಕುಸಿದು ಬಿದ್ದಿದ್ದಾರೆ.ಶಿವಶಂಕರ್ ತಲೆ ಮತ್ತು ಭುಜಕ್ಕೆ ತೀವ್ರ ಗಾಯಗಳಾದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದರು.ನಿರ್ವಾಹಕ ಐದನೇ ಮಹಡಿಯಿಂಡ ಬಿದ್ದ ಶಬ್ದ ಕೇಳಿದ ಭವನದ ಸಿಬ್ಬಂದಿ ವಿಧಾನಸೌಧ ಪೋಲೀಸರಿಗೆ ವಿಷಯ ತಿಳಿಸಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದರು.
ಶಿವಶಂಕರ್ ಗೆ ಆರೋಗ್ಯ ಸಮಸ್ಯೆಗಳಿತ್ತು. ಅವರನ್ನು ಲ್ಹೆಚ್ -2 ನ ಮೊದಲ ಮಹಡಿಯಲ್ಲಿ ಬುಕಿಂಗ್ ಕೌಂಟರ್ ಕೆಲಸಕ್ಕೆ ನಿಯೋಜಿಸಲಾಗಿತ್ತು. ಶಿವಶಂಕರ್ ಮನಕ್ಲೇಶದಿಂಡಾಗಿ ಬಿದ್ದು ಸತ್ತಿರಬಹುದು ಎಂದು ಕೀಸ್ಸಾರ್ಟಿಸಿಯ ಓರ್ವ ಅದ್ಝಿಕಾರಿ ಹೇಳಿದ್ದಾರೆ. ಆದರೆ ಶಿವಶಂಕರ್ ಕುಟುಂಬ ಶಿವಶಂಕರ್ ಕೆಲವೇ ದಿನಗಳ ಹಿಂದೆ ಜಾಂಡೀಸ್ ನಿಂದ ಗುಣಮುಖರಾಗಿದ್ದರು. ಹೀಗಾಗಿ ಅವರು ಆರೋಗ್ಯ ಸಮಸ್ಯೆ ಇದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಧ್ಯವಿಲ್ಲ, ಈ ಘಟನೆ ಆಕಸ್ಮಿಕವಾಗಿ ನಡೆದಿರಬಹುದು ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos