ರಾಜ್ಯ

ದ್ವಿತೀಯ ಪಿಯುನಲ್ಲಿ ಉತ್ತಮ ಅಂಕ ಗಳಿಸಿದವರಿಗೆ ನಿಸ್ವಾರ್ಥ ಫೌಂಡೇಶನ್ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Srinivas Rao BV
ಬೆಂಗಳೂರು: ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (2018-19 ಶೈಕ್ಷಣಿಕ ವರ್ಷ) ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ, ಉನ್ನತ  ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ಅಗತ್ಯವಿರುವ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿ ವೇತನ ನೀಡಲು ನಿಸ್ವಾರ್ಥ ಫೌಂಡೇಶನ್ ಮುಂದಾಗಿದೆ. 
ಆರ್ಥಿಕ ನೆರವಿನ  ಅಗತ್ಯವಿರುವ ಅರ್ಹ  ವಿದ್ಯಾರ್ಥಿಗಳಿಂದ ನಿಸ್ವಾರ್ಥ ಫೌಂಡೇಶನ್ ಅರ್ಜಿಗಳನ್ನು ಆಹ್ವಾನಿಸಿದ್ದು, ಕೆಲವು ನಿಬಂಧನೆಗಳು ಅನ್ವಯವಾಗಲಿದೆ. 
ಅರ್ಹ ವಿದ್ಯಾರ್ಥಿಗಳು www.nisvartha.org  ವೆಬ್ ಸೈಟ್ ಮೂಲಕ ತಮ್ಮ ವಿವರಗಳ ಸಹಿತ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಸಂಸ್ಥೆಯವರು ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಾರೆ.  ಆರ್ಥಿಕ ನೆರವು ಅಗತ್ಯವಿರುವ ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗುವ ನಿಟ್ಟಿನಲ್ಲಿ ನಿಸ್ವಾರ್ಥ ಫೌಂಡೇಶನ್ 2009 ರಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. 
SCROLL FOR NEXT