ಪ್ರಜ್ಞಾ ಶೆಟ್ಟಿ 
ರಾಜ್ಯ

ಉಡುಪಿ: ಕನ್ನಡದಲ್ಲಿ ಫೇಲ್ ಆದೆ ಅಂತ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ!

ಸೋಮವಾರ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲ ಸ್ಥಾನದ ಅಂಕ (ಫಸ್ಟ್ ಕ್ಲಾಸ್ ಮಾರ್ಕ್) ಪಡೆದಿದ್ದೂ ಕನ್ನಡದಲ್ಲಿ ಮಾತ್ರ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು....

ಉಡುಪಿ: ಸೋಮವಾರ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲ ಸ್ಥಾನದ ಅಂಕ (ಫಸ್ಟ್ ಕ್ಲಾಸ್ ಮಾರ್ಕ್) ಪಡೆದಿದ್ದೂ ಕನ್ನಡದಲ್ಲಿ ಮಾತ್ರ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಬ್ರಹ್ಮಾವರ ನಾಲ್ಕೂರು ಗ್ರಾಮ ನಡ್ಕೇರಿ ಮೇಲ್ಮನೆ ನಿವಾಸಿ ಪ್ರಜ್ಞಾ ಶೆಟ್ಟಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. 
ಪ್ರಜ್ಞಾ, ಬ್ರಹ್ಮಾವರದ ಬೋರ್ಡ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಳು. ಸೋಮವಾರ ಫಲಿತಾಶ ಗೋಷಣೆಯಾಗಿದ್ದು ಬೆಂಗಳುರಿನಲ್ಲಿದ್ದ ಆಕೆಯ ಸಂಬಂಧಿಕರು ಫಲಿತಾಂಶ ನೋಡಿದಾಗ ಕನ್ನಡದಲ್ಲಿ 4 ಅಂಕ ಅಗಳಿಸಿ ಅನುತ್ತೀರ್ಣಳಾಗಿದ್ದು ತಿಳಿದಿದೆ.
ಬೇರೆಲ್ಲಾ ವಿಷಗಳಲ್ಲಿ 60ಕ್ಕಿಂತ ಹೆಚ್ಚು ಅಂಕ ಪಡೆದಿದ್ದ ಪ್ರಜ್ಞಾಗೆ  ಕನ್ನಡದಲ್ಲಿ ಕಡಿಮೆ ಅಂಕ ಬಂದಿದ್ದು ಮನಸ್ಸಿಗೆ ಆಘಾತ ನಿಡಿದೆ. ಮನೆಯಲ್ಲಿ ತಾಯಿ, ಅಜ್ಜಿ ಇರುವ ವೇಳೆಯೇ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಕುರಿತು ಹೆಬ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NCERT Row: 'ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ': ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

ತಂದೆ ಖಾನ್ ಚಂದ್ ನಿಧನ: ಜಿಂಬಾಬ್ವೆ ವಿರುದ್ಧ ಗೆದ್ದ ಖುಷಿಯಲ್ಲಿದ್ದ ರಿಂಕು ಸಿಂಗ್ ಗೆ ಆಘಾತ!

ನಮ್ಮ ತಾಳ್ಮೆಯ ಮಿತಿ ಮೀರಿದೆ, ಬಹಿರಂಗ ಯುದ್ಧ ಆರಂಭ: ಅಫ್ಘಾನ್ ಮಿಲಿಟರಿ ದಾಳಿಗೆ ಪಾಕ್‌ನಿಂದ ಪ್ರತ್ಯುತ್ತರ

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಕುಣಿಗಲ್ ನಿವಾಸಿಗಳ ದಾರುಣ ಸಾವು

SCROLL FOR NEXT