ನವಜಾತ ಶಿಶು ರಕ್ಷಿಸಿದ ಸುನೀಲ್ ಕುಮಾರ್ 
ರಾಜ್ಯ

ಬೆಂಗಳೂರು: ಆಟೋ ಚಾಲಕನಿಂದ ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶು ರಕ್ಷಣೆ

ಕಸದ ತೊಟ್ಟಿ ಸಮೀಪ ಇರಿಸಿದ್ದ ನವಜಾತ ಶಿಶುವನ್ನು ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

ಬೆಂಗಳೂರು:  ಕಸದ ತೊಟ್ಟಿ ಸಮೀಪ ಇರಿಸಿದ್ದ ನವಜಾತ ಶಿಶುವನ್ನು ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಂದಿನಿ ಲೇಔಟ್‌ನ ಸುನೀಲ್‌ ಕುಮಾರ್‌ ಮಗುವನ್ನು ರಕ್ಷಿಸಿದ ಆಟೋ ಚಾಲಕ. ಸುನೀಲ್‌ ಕುಮಾರ್‌ ಶುಕ್ರವಾರ ಬೆಳಗ್ಗೆ 8.15 ಕ್ಕೆ ಸುಮಾರಿಗೆ ಪೀಣ್ಯದ ಇಎಸ್‌ಐ ಆಸ್ಪತ್ರೆ ಬಳಿ ಆಟೋ ಚಾಲನೆ ಮಾಡಿಕೊಂಡು ಹೋಗುವಾಗ ಮೂತ್ರ ವಿಸರ್ಜಿಸಲೆಂದು ಆಟೋ ನಿಲ್ಲಿಸಿದ್ದಾರೆ.
ಈ ವೇಳೆ ಕಸದ ತೊಟ್ಟಿ ಬಳಿ ಮಗುವಿನ ಅಳು ಕೇಳಿಸಿದೆ. ಹತ್ತಿರ ಹೋಗಿ ನೋಡಿದಾಗ ಬಟ್ಟೆಯಲ್ಲಿ ನವಜಾತ ಗಂಡು ಮಗು ಕಂಡುಬಂದಿದೆ. ಕೂಡಲೇ ಮಗುವನ್ನು ಸ್ಥಳೀಯ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಮಗು ಆರೋಗ್ಯವಾಗಿತ್ತು.
ನಂತರ ಆರ್‌ಎಂಸಿ ಯಾರ್ಡ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಆಸ್ಪತ್ರೆಗೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮಗುವಿನ ಪೋಷಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ 
ನವಜಾತ ಶಿಶುವನ್ನು ಸಾಕಲು ಹಲವರು ಮುಂದೆ ಬಂದಿದ್ದಾರೆ ಆದರೆ ಶಿವಕುಮಾರ್ ಅವರು ಮಗುವನ್ನು ಯಾರಿಗೂ ನೀಡದೇ ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ್ದಾರೆ, ಕಾನೂನು ಪ್ರಕ್ರಿಯೆಗಳ ಪಾಲನೆ ಬಳಿಕ ಮಗು ದತ್ತು ಪ್ರಕ್ರಿಯೆಗೆ ಅವಕಾಶವಿದೆ ಎಂದು ಹೇಳಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT