ರಾಜ್ಯ

ಐಟಿ ದಾಳಿ: ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿ 2.30 ಕೋಟಿ ರೂ. ಪತ್ತೆ!

Vishwanath S
ಶಿವಮೊಗ್ಗ: ಏಪ್ರಿಲ್ 23ರಂದು ರಾಜ್ಯದ 14 ಜಿಲ್ಲೆಗಳ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಈ ಮಧ್ಯೆ ಐಟಿ ಅಧಿಕಾರಿಗಳು ಸಹ ಹಲವು ಕಡೆ ದಾಳಿ ನಡೆಸಿದ್ದು ಬರೋಬ್ಬರಿ 4 ಕೋಟಿ ರುಪಾಯಿಯನ್ನು ವಶಪಡಿಸಿಕೊಂಡಿದೆ. 
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿದ್ದ ಕಾರಿನ ಸ್ಟೆಪ್ನಿಯಲ್ಲಿ ಹಣ ರವಾನೆ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಐಟಿ ಅಧಿಕಾರಿಗಳು ಕಾರನ್ನು ನಿಲ್ಲಿಸಿ ಪರೀಕ್ಷಿಸಿದ್ದಾರೆ. ಈ ವೇಳೆ ಕಾರಿನ ಟೈರ್ ನಲ್ಲಿ 2.30 ಕೋಟಿ ರುಪಾಯಿ ಪತ್ತೆಯಾಗಿದೆ. 
ಇನ್ನೊಂದೆಡೆ ಬಾಗಲಕೋಟೆಯ ನವನಗರದ ಬ್ಯಾಂಕ್ ಉದ್ಯೋಗಿಯ ಮನೆಯೊಂದರಲ್ಲಿ 1 ಕೋಟಿ ರುಪಾಯಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಚುನಾವಣೆಗೆ ಹಂಚಲೆಂದೇ ಶೇಖರಿಸಲಾಗಿತ್ತು ಎಂದು ಹೇಳಲಾಗಿದೆ.
ಇದೇ ಅಲ್ಲದೆ ವಿಜಯಪುರದಲ್ಲಿ ನಡೆದ ದಾಳಿ ವೇಳೆ 10 ಲಕ್ಷ ರುಪಾಯಿ ಸಿಕ್ಕಿದೆ. ಕರ್ನಾಟಕ ಹಾಗೂ ಗೋವಾದಲ್ಲಿ ಇಂದು ನಡೆದ ದಾಳಿಯಲ್ಲಿ ಐಟಿ ಅಧಿಕಾರಿಗಳು ಸುಮಾರು 4.50 ಕೋಟಿ ರುಪಾಯಿಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡಿದ್ದಾರೆ.
SCROLL FOR NEXT