ರಾಜ್ಯ

ಶ್ರೀಲಂಕಾ ಸ್ಪೊಟ: ರಾಜ್ಯದ ಐವರ ಮೃತದೇಹ ಬೆಂಗಳೂರಿಗೆ

Raghavendra Adiga
ಬೆಂಗಳೂರು: ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ ರಾಜ್ಯದ ಐವರ ಮೃತದೇಹ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದೆ. ಸ್ಪೋಟದಲ್ಲಿ ಒಟ್ಟು 8 ಕನ್ನಡಿಗರು ಸಾವನ್ನಪ್ಪಿದ್ದು ಇದರಲ್ಲಿ ಐವರ ಶವಗಳು ಬೆಂಗಳೂರಿಗೆ ಆಗಮಿಸಿದ್ದು ಕುಟುಂಬಿಗರು, ಆಪ್ತರ ಆಕ್ರಂದನ ಮುಗಿಲು ಮುಟ್ಟಿದೆ.
ಶೆಟ್ಟಿಪಾ:ಳ್ಯದ ರಾಮಕೃಷ್ಣಪ್ಪ ನಾಗರಾಜ್, ಕಾಚನಹಳ್ಳಿಯ ಹನುಮಂತರಾಯಪ್ಪ, ಎಂ. ಲಕ್ಷ್ಮಿನಾರಾಯಣ, ಮುನಿಯಪ್ಪ ರಂಗಪ್ಪ ಮತ್ತು ಹನುಮಯ್ಯ ಶಿವಕುಮಾರ್ ಅವರ ದೇಹಗಳು ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದೆ.
ಯುಎಲ್-173 ಶ್ರೀಲಂಕಾ ಏರ್ ಲೈನ್ಸ್ ವಿಮಾನದಲ್ಲಿ ಈ ಮೃತದೇಹವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ತರಲಾಗಿತ್ತು. ಆ ವೇಳೆ ನೆಲಮಂಗಲ ಶಾಸಕ ಶ್ರೀನಿವಾಸ್, ಇ.ಕೃಷ್ಣಪ್ಪ  ಆಗಮಿಸಿದ್ದು ಮೃತರ ಅಂತಿಮ ದರ್ಶನ ಪಡೆದಿದ್ದಾರೆ.
ಇನ್ನು ಗೃಹಸಚಿವ ಎಂಬಿ ಪಾಟೀಲ್ ಸಹ ಮೃತರ ಅಂತಿಮ ದರ್ಶನ ಪಡೆದು ಪುಷ್ಪಗುಚ್ಚವಿಟ್ಟು ಗೌರವ ಸಲ್ಲಿಸಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದ ಇನ್ನೂ ಮೂವರ ಮೃತದೇಹಗಳು ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪಲಿದೆ ಎನ್ನಲಾಗಿದೆ,
SCROLL FOR NEXT