ರಾಜ್ಯ

ಬೆಂಗಳೂರು: ಟೆರೇಸ್ ಮೇಲೆ ಯೋಗಾಭ್ಯಾಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಯುವತಿ ಸಾವು

Raghavendra Adiga
ಬೆಂಗಳೂರು: ತನ್ನ ದೈನಂದಿನ ದಿನಚರಿಯಂತೆ ಟೆರೇಸ್ ಮೇಲೆ ಹೋಗಿ ಯೋಗಾಭ್ಯಾಸದಲ್ಲಿ ನಿರತವಾಗಿದ್ದ ಅಪ್ರಾಪ್ತ ಯುವತಿಯೊಬ್ಬಳು ಆಕಸ್ಮಿಕವಾಗಿ ಟೆರೇಸ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ ಸೂರ್ಯ ಸಿಟಿ ಪೊಲೀಸ್ ಠಾಣೆ  ವ್ಯಾಪ್ತಿಯ ಚಂದಾಪುರ, ರಾಮಕೃಷ್ಣಪುರದಲ್ಲಿನ ಸಿತಾರಾ ಅಪಾರ್ಟ್ ಮೆಂಟ್ ನಲ್ಲಿ ನಡೆದ ದುರಂತದಲ್ಲಿ ಪ್ರಿಯಾಂಕಾ ಪಾಲ್ (17 ) ಸಾವಿಗೀಡಾಗಿದ್ದಾಳೆ. ಮೃತಳು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ಪಿಯು ವ್ಯಾಸಂಗ ಮಾಡುತ್ತಿದ್ದಳು. 
ಬೆಳಿಗ್ಗೆ 8 ಗಂಟೆ ವೇಳೆಗೆ ಪ್ರಿಯಾಂಕಾ ದಿನನಿತ್ಯದ ಅಭ್ಯಾಸದಂತೆ ಟೆರೇಸ್ ಮೇಲೇರಿ ಯೋಗಾಭ್ಯಾಸದಲ್ಲಿ ತೊಡಗಿದ್ದಾಗ ಆಯತಪ್ಪಿ ಕೆಲಕ್ಕೆ ಬಿದ್ದಿದ್ದಾಳೆ, ಬಿದ್ದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇದು ಆಕಸ್ಮಿಕ ಘಟನೆಯೇ ಹೊರತು ಆತ್ಮಹತ್ಯೆ ಪ್ರಕರಣವಲ್ಲ ಎಂದು ಪೋಲೀಸರು ಖಚಿತಪಡಿಸಿದ್ದಾರೆ.
ಮೃತ ಪ್ರಿಯಾಂಕಾ ಸಿತಾರಾ ಅಪಾರ್ಟ್ ಮೆಂಟಿನ ಮೂರನೇ ಮಹಡಿಯ ಫ್ಲಾಟ್ ನಲ್ಲಿ ತಮ್ಮ ಪೋಷಕರೊಡನೆ ವಾಸಿಸುತ್ತಿದ್ದಳು. ಘಟನೆ ನಡೆವ ವೇಳೆ ಆಕೆಯ ಪೋಷಕರು ತಮ್ಮ ದಿನನಿತ್ಯದ ಮನೆಗೆಲಸದಲ್ಲಿ ತೊಡಗಿದ್ದರು. ಪ್ರಿಯಾಂಕಾ ತಾನು ಅಪಾರ್ಟ್ ಮೆಂಟ್ ಒಂಬತ್ತನೇ ಮಹಡಿಯಲ್ಲಿದ್ದ ಟೆರೇಸ್ ಮೇಲೆ ಯೋಗದಲ್ಲಿ ತೊಡಗಿದ್ದಾಗ ವಾಟರ್ ಪೈಪ್ ಲೈನ್ ದಾಟಿದ್ದಾಳೆ ಹಾಗೂ ಟೆರೇಸ್ ನಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೋಲೀಸರು ವಿವರಿಸಿದರು.
"ನಾವು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದೇವೆ, ಆಕೆ ಟೆರೇಸ್ ಗೆ ಏಕಾಂಗಿಯಾಗಿ ಹೋಗಿದ್ದಳು ಮತ್ತು ಟೆರೇಸ್ ಮೇಲಿನ ಗೋಡೆಯು ಯಾವುದೇ ವ್ಯಕ್ತಿ ಬೀಳದಷ್ಟು ಎತ್ತರವಾಗಿರಲಿಲ್ಲ. ಇನ್ನು ಘಟನೆ ಬಳಿಕ ಅಪಾರ್ಟ್ ಮೆಂಟ್ ಮಾಲೀಕರು ಹಾಗೂ ಸುತ್ತಲಿನವರಿಗೆ ಮುಂದಿನ ದಿನದಲ್ಲಿ ಇಂತಹಾ ಘಟನೆ ಮರುಕಳಿಸದಿರಲು ಮುಂಜಾಗ್ರತೆಯಾಗಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದ್ದು ಅಪಾರ್ಟ್ ಮೆಂಟ್ ಮಾಲೀಕರ ವಿರುದ್ಧ ಯಾವ ಕ್ರಮವಿಲ್ಲ" ಪೋಲೀಸರು ಮಾಹಿತಿ ನೀಡಿದ್ದಾರೆ.
ಮೃತಳ ತಂದೆ ಅಂಜನ್ ಕುಮಾರ್ ಪಾಲ್ ಕೋಲ್ಕತ್ತಾ ಮೂಲದವರಾಗಿದ್ದು ಆತ ಸಹ ಮಗಳು ಆತ್ಮಹತ್ಯೆ ಮಾಡಿಕೊಂಡದ್ದಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಪಾಲ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳೀದ್ದು ಪ್ರಿಯಾಂಕಾ ಅವರಲ್ಲಿ ಹಿರಿಯವಳಾಗಿದ್ದಳು, ಪಾಲ್ ನಗರದ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
SCROLL FOR NEXT