ರಾಜ್ಯ

ಅಕ್ರಮ ಆಸ್ತಿ ಪ್ರಕರಣ: ಬ್ಯಾಂಕ್ ಮ್ಯಾನೇಜರ್ ಗೆ 5 ವರ್ಷ ಜೈಲು, 50 ಲಕ್ಷ ದಂಡ

Lingaraj Badiger
ಬೆಂಗಳೂರು: ಅಕ್ರಮವಾಗಿ ಆದಾಯ ಮೀರಿ ಆಸ್ತಿ ಹೊಂದಿದ್ದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಹೆಚ್.ಎಸ್. ಈಶ್ವರ್ ಅವರು ತಪ್ಪಿತಸ್ಥ ಎಂದು ಸಿಬಿಐ ಪ್ರಕರಣಗಳ 46ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ವಿಶೇಷ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. 
ನ್ಯಾಯಾಧೀಶೆ ಎಸ್ .ಹೆಚ್. ಪುಷ್ಪಾಂಜಲಿ ದೇವಿ ತಮ್ಮ ತೀರ್ಪನಲ್ಲಿ ತಪ್ಪಿತಸ್ಥ ಬ್ಯಾಂಕ್ ವ್ಯವಸ್ಥಾಪಕನಿಗೆ ಐದು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ. 
ತಪ್ಪಿತಸ್ಥ ಮಾನೇಜರ್ ಹೊಂದಿರುವ 4,90,31,838 ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ತನಿಖೆ ನಡೆಸಿದ ಸಿಬಿಐನ ಭ್ರಷ್ಟಾಚಾರ ನಿರೋಧಕ ದಳ ಈಶ್ವರ್ ಅವರು 2011 ರಿಂದ 2014ರವರೆಗೆ  ಆರು ಕೋಟಿ 47ಲಕ್ಷ 75ಸಾವಿರದ 873 ರೂಪಾಯಿ ಆದಾಯ ಮೀರಿ ಆಸ್ತಿ ಗಳಿಸಿದ್ದರು ಎಂದು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿತ್ತು.
SCROLL FOR NEXT