ಆರ್ಟಿಕಲ್ 370 ರದ್ದು: ಇತಿಹಾಸದಲ್ಲಿ ಮೋದಿ ಅಜರಾಮರ, ಜೈ ನರೇಂದ್ರ ಮೋದಿ- ಕೆಎಸ್ ಭಗವಾನ್!
ಬೆಂಗಳೂರು: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದಿಟ್ಟ ನಿರ್ಧಾರಕ್ಕೆ ವಿಪಕ್ಷಗಳು, ವಿರೋಧಿಗಳೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರೊ. ಕೆಎಸ್ ಭಗವಾನ್ ಆರ್ಟಿಕಲ್ 370 ರದ್ದತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮೋದಿ ದಿಟ್ಟ ನಿರ್ಧಾರವನ್ನು ಹಾಡಿ ಹೊಗಳಿದ್ದಾರೆ.
ಆರ್ಟಿಕಲ್ 370 ರದ್ದತಿಯಿಂದಾಗಿ ಕಾಶ್ಮೀರಕ್ಕೆ ಸುರಿಯಲಾಗುತ್ತಿದ್ದ ಕೋಟ್ಯಾಂತರ ರೂಪಾಯಿ ಹಣವನ್ನು ಇನ್ನು ಮುಂದೆ ಜನತೆಯ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಬಳಸುವುದಕ್ಕೆ ಅನುಕೂಲವಾಗಲಿದೆ. ಮೋದಿ 70 ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯನ್ನು ಸಂತಸಪಡಿಸಿದ್ದಾರೆ ಎಂದು ಭಗವಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್ಟಿಕಲ್ 370 ರದ್ದುಗೊಳಿಸುವುದರಿಂದ ಪ್ರಧಾನಿ ಮೋದಿ ಅವರು ಇಡೀ ದೇಶವನ್ನು ಒಂದೇ ಸಂವಿಧಾನದ ಅಡಿ ತಂದಿರುವುದು ಶ್ಲಾಘನೀಯ ಎಂದಿರುವ ಪ್ರೊ.ಭಗವಾನ್, ಮೋದಿ ಇನ್ನು ಇತಿಹಾಸದಲ್ಲಿ ಅಜರಾಮರರಾಗಿ ಉಳಿಯುತ್ತಾರೆ ಎನ್ನಲು ಸಂತೋಷ ಮತ್ತು ಹೆಮ್ಮೆ ಆಗುತ್ತದೆ ಜೈ ನರೇಂದ್ರ ಮೋದಿ ಎಂದು ಪ್ರಧಾನಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.