ಹೆಚ್.ಕೆ.ಪಾಟೀಲ್ 
ರಾಜ್ಯ

ಪ್ರವಾಹ ಸಂತ್ರಸ್ಥರ ಸಹಾಯಕ್ಕೆ ಹೋಗಿ ಸಂಕಷ್ಟಕ್ಕೆ ಸಿಕ್ಕಿದ ಹೆಚ್.ಕೆ.ಪಾಟೀಲ್, ಕ್ಷೇಮ ವಿಚಾರಿಸಿದ ಯಡಿಯೂರಪ್ಪ

ಮುಂಬೈ-ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆ ಮಾಡಿ ಕ್ಷೇಮ ವಿಚಾರಿಸಿದ್ದಾರೆ

ಗದಗ: ಮುಂಬೈ-ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆ ಮಾಡಿ ಕ್ಷೇಮ ವಿಚಾರಿಸಿದ್ದಾರೆ
ಶುಕ್ರವಾರದಿಂದ ಕೆಪಿಸಿಸಿ ಎರಡು ತಂಡಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಆರಂಭಿಸಿದೆ.
ಗದಗ ಜಿಲ್ಲೆಯ ಕೊಣ್ಣೂರು ಮತ್ತು ಹೊಳೆ ಆಲೂರು ಮಧ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ಥರಿಗೆ ಹೆಚ್ ಕೆ ಪಾಟೀಲ್ ನೇತೃತ್ವದ ತಂಡ ಹೊದಿಕೆ ವಿತರಿಸಲು ಮುಂದಾಗಿತ್ತು.
ಮಲಪ್ರಭಾ ನದಿ ಪ್ರವಾಹಪೀಡಿತ ವಾಸನ್, ಬೂದಿಹಾಳ, ಕೊಣ್ಣೂರು, ಹೊಳೆ-ಆಲೂರು ಗ್ರಾಮಗಳ   ಸಂತ್ರಸ್ಥರ  ನೆರವಿಗೆ ಮುಂದಾದಾಗ ಪಾಟೀಲ್ ಅವರ ತಂಡದ ವಾಹನ  4 ಅಡಿ ಮಟ್ಟದ ನೀರಿನಲ್ಲಿ  ಸಿಲುಕಿ ಹಾಕಿಕೊಂಡು ಮುಂದೆ ಪ್ರಯಾಣಿಸದ ಸ್ಥಿತಿ ಉಂಟಾಗಿ ಸುಮಾರು 2 ತಾಸುಗಳು ತೊಂದರೆಗೆ ಸಿಲುಕುವಂತಾಯಿತು.
ಈ ಸಂದರ್ಭದಲ್ಲಿ  ಯಡಿಯೂರಪ್ಪ ಅವರು ಎಚ್.ಕೆ. ಪಾಟೀಲರಿಗೆ ದೂರವಾಣಿ ಮೂಲಕ ಕರೆ ಮಾಡಿ ಪರಿಸ್ಥಿತಿ ಬಗ್ಗೆ ವಿಚಾರಿಸಿದರು. ಆಗ ತಮ್ಮ ಕಾಳಜಿಗಿಂತ ಹೆಚ್ಚು ನೆರೆ ಸಂತ್ರಸ್ಥರ ಕಾಳಜಿ ಮಾಡಬೇಕಾಗಿರುವುದು ಅವಶ್ಯಕತೆಯಿದೆ. ಕೊಣ್ಣೂರು ಮತ್ತು ಹೊಳೆ ಆಲೂರು ಗ್ರಾಮಗಳು ಪೂರ್ಣವಾಗಿ ಮುಳುಗಡೆಯಾಗಿವೆ. ಅಲ್ಲಲ್ಲಿ  ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೆರೆ ಪರಿಸ್ಥಿತಿ ಗಂಭೀರವಾಗಿದ್ದರೂ ಪರಿಹಾರ  ಕಾರ್ಯ ಚುರುಕುಗೊಂಡಿಲ್ಲ ಎಂದು ಪಾಟೀಲರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
 ಜುಲೈ 31ರ ಒಳಗೇ ಮುಗಿದು ಹೋಗಿರುವ ಫಸಲ್ ಭೀಮಾ ಯೋಜನೆಯ ವಿಮಾ  ಕಂತು ಪಾವತಿ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲು ಕೇಂದ್ರದ ಮೇಲೆ ಒತ್ತಡ  ಹೇರುವಂತೆ ಯಡಿಯೂರಪ್ಪ ಅವರಿಗೆ ಪಾಟೀಲರು ಮನವಿ ಮಾಡಿದರು. 
ಮುಖ್ಯಮಂತ್ರಿಗಳ ಕರೆಯ ನಂತರ ಅರ್ಧ ಗಂಟೆಯಲ್ಲಿ ಪೊಲೀಸ್ ವಾಹನ ಮತ್ತಿತರ ವಾಹನಗಳು ಪಾಟೀಲರ ಬಳಿ ಧಾವಿಸಿದವು.  ಬಾಗಲಕೋಟೆಗೆ ಬೋಟುಗಳ ಮೂಲಕ ತೆರಳಬೇಕೆಂಬ ಪ್ರಯತ್ನದಲ್ಲಿದ್ದಾಗ ಸ್ಥಳೀಯರು ಮತ್ತು ಜೊತೆಗಿದ್ದವರೆಲ್ಲ ಗೂಡ್ಸ್ ರೈಲಿನ ಮೂಲಕ ಹೋಗುವಂತೆ ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!