ರಾಜ್ಯ

ಉತ್ತರ ಕರ್ನಾಟಕದಲ್ಲಿ ನೆರೆ- ಚಿತ್ರದುರ್ಗದಲ್ಲಿ ಬರ: ಅತೀ ವೃಷ್ಠಿ-ಅನಾವೃಷ್ಠಿಯಿಂದ ರಾಜ್ಯ ತತ್ತರ!

Shilpa D

ಚಿತ್ರದುರ್ಗ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಕಂಡು ಕೇಳರಿಯದ ಸಮಸ್ಯೆ ಎದುರಾಗಿದೆ, ಆದರೆ ಇದರ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಜಿಲ್ಲೆಯಾದ್ಯಂತ ಮಳೆಯಿಲ್ಲದೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ,  ಸರಿಯಾದ ಪ್ರಮಾಣದಲ್ಲಿ ಮಳೆಯಾಗದ ಕಾರಣ ದಿಂದಸುಮಾರು 130 ಗ್ರಾಮಗಳಿಗೆ ಟ್ಯಾಂಕರ್ ನಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 

ಜಿಲ್ಲೆಯ ವಿವಿಧ ಪ್ರದೇಶದಲ್ಲಿ 66 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 130 ಗ್ರಾಮಗಳಿಗೆ  ಪ್ರತಿದಿನ 3.06 ಲಕ್ಷ ರು ಮೌಲ್ಯದ ನೀರು ಸರಬರಾಜು ಮಾಡಲಾಗುತ್ತಿದೆ. 

ಹಿರಿಯೂರಿಗೆ 29 ಟ್ಯಾಂಕರ್ ಹಾಗೂ ಚಳ್ಳಕೆರೆಗೆ 28 ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಸತ್ಯಭಾಮಾ ಹೇಳಿದ್ದಾರೆ.

130 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಬೋರ್ ವೆಲ್ ಗಳು ವಿಫಲವಾಗಿವೆ,  ಹೀಗಾಗಿ ಕುಡಿಯುವ ನೀರಿನ ಪೂರೈಕೆ ಅವಶ್ಯವಾಗಿದೆ,  ಜಿಲ್ಲೆಗೆ ಅವಶ್ಯಕ ಪ್ರಮಾಣದಲ್ಲಿ ಮಳೆಯಾಗುವವರೆಗೂ ನೀರು ಪೂರೈಸಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT