ಬೆಂಗಳೂರು: ರಾಜ್ಯದಲ್ಲಿ ಭೀಕರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಜ್ಯವು ಜಲ ಸಂಕಷ್ಟದಲ್ಲಿದೆ. ಈ ನಡುವೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಕರ್ನಾಟಕಕ್ಕೆ ಆಗಮಿಸಲಿದ್ದು ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧ ನೆರೆ ಸಂತ್ರಸ್ಥ ಜಿಲ್ಲೆಗಳಿಗೆ ಭೇಟಿ ಕೊಡಲಿದ್ದಾರೆ.
ಕರ್ನಾಟಕದಲ್ಲಿ 80,000 ಕ್ಕೂ ಹೆಚ್ಚು ಪ್ರವಾಹ ಪೀಡಿತ ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದ ನೆರೆ ಪರಿಸ್ಥಿತಿಯಿಂದ ಇದುವರೆಗೆ 12 ಜನರು ಪ್ರಾಣ ಕಳೆದುಕೊಂಡಿದ್ದು ಸಿಎಂ ಯಡಿಯೂರಪ್ಪ ಮೃತಪಟ್ಟ ಜನರ ರಕ್ತಸಂಬಂಧಿ ಗಳಿಗೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಸೀತಾರಾಮನ್ ಅವರು ವೈಮಾನಿಕ ಸಮೀಕ್ಷೆ ಅಲ್ಲದೆ ರಸ್ತೆ ಮಾರ್ಗದ ಮೂಲಕ ಸಹ ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಪ್ರವಾಹ ಮತ್ತು ಮಳೆಯು ರಾಜ್ಯದ ಉತ್ತರ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರೀ ಹಾನಿಯನ್ನುಂಟು ಮಾಡಿದೆ.