ರಾಜ್ಯ

ರಕ್ಷಣೆ ವೇಳೆ ಭೀಕರ ದೃಶ್ಯ: 70ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದ 5 ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ್ರು!

Vishwanath S

ಕೊಪ್ಪಳ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿರುಪಾಪುರ ಗಡ್ಡೆಯಲ್ಲಿ ಸಿಲುಕ್ಕಿದ್ದ 25 ವಿದೇಶಿಯರು ಸೇರಿ 70ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದ ರಕ್ಷಣಾ ಸಿಬ್ಬಂದಿ ಬೋಟ್ ಮುಳಿಗಿ ಐವರು ಸಿಬ್ಬಂದಿ ಕೊಚ್ಚಿಕೊಂಡು ಹೋಗಿರುವ ದಾರುಣ ಘಟನೆ ನಡೆದಿದೆ.

ಬೋಟ್ ನಲ್ಲಿದ್ದ ಮೂವರು ಎನ್ಡಿಎಫ್ ಮತ್ತು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. 70ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಉಳಿದ ನಿರಾಶ್ರಿತರನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿ ಬೋಟ್ ಮುಗುಚಿಕೊಂಡಿದೆ. 

ಈ ವೇಳೆ ಐವರು ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ 25 ವಿದೇಶಿಯರು ಸೇರಿ 70ಕ್ಕೂ ಜನರು ಸಿಲುಕಿದ್ದರು. ಬೆಳಗಿನಿಂದ ರಕ್ಷಣೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸಿಬ್ಬಂದಿ ಅವರನ್ನು ರಕ್ಷಿಸಿದ್ದರು. 

ಇನ್ನು ಉಳಿದವರ ರಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ನೀರಿನ ಪ್ರವಾಹಕ್ಕೆ ಸಿಲುಕಿ ಬೋಟ್ ನೀರಿನಲ್ಲಿ ಮುಳುಗಿ ಈ ದುರ್ಘಟನೆ ಸಂಭವಿಸಿತ್ತು. 

SCROLL FOR NEXT