ರಾಜ್ಯ

3 ಸಾವಿರ ಅಡಿ ರಂಗೋಲಿಯಲ್ಲಿ ಅರಳಿದ ರಾಷ್ಟ್ರ ಧ್ವಜ: ದೇಶ ಪ್ರೇಮ ಮೆರೆದ ಬೆಂಗಳೂರು ವಿದ್ಯಾರ್ಥಿಗಳು

Lingaraj Badiger

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಪ್ತಗಿರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮೂರು ಸಾವಿರ ಅಡಿ ಉದ್ದದ ಅತ್ಯಾಕರ್ಷಕ ಚಿತ್ತಾರಗಳೊಂದಿಗೆ ರಾಷ್ಟ್ರಧ್ವಜದ ರಂಗೋಲಿ ಬಿಡಿಸಿ ದೇಶಪ್ರಮದ ಪಾರಮ್ಯ ಮೆರೆದಿದ್ದಾರೆ.

ವಿದ್ಯಾರ್ಥಿಗಳ ಜತೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಸಪ್ತಗಿರಿ ಕ್ಯಾಂಪಸ್ ಆಟದ ಮೈದಾನದಲ್ಲಿ ಹಗಲಿರುಳು ಶ್ರಮಿಸಿ ಬೃಹತ್ ತ್ರಿವರ್ಣ ಧ್ವಜ ಬಿಡಿಸಿದ್ದಾರೆ.

ಜಮ್ಮು - ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರ ರದ್ದು, ಭಾರತದ ಮುಖ್ಯವಾಹಿನಿಯಲ್ಲಿ ಕಾಶ್ಮೀರ ಕಣಿವೆ ರಾಜ್ಯ ಸೇರ್ಪಡೆಯಾಗಿರುವ ಈ ಸುಸಂದರ್ಭದಲ್ಲಿ “ ದೇಶಕ್ಕೆ ಒಂದು ನಮನ “ ಎನ್ನುವ ಪರಿಕಲ್ಪನೆಯಡಿ ಬಣ್ಣಗಳಿಂದ ತ್ರಿವರ್ಣ ದ್ವಜ ಅರಳಿದೆ.

ವಿನೂತನ ಮಾದರಿಯಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಗಾಗಿ 300 ಕೆಜಿ ರಂಗೋಲಿ ಬಿಳಿ, ಕೇಸರಿ ಹಸಿರು ಬಣ್ಣದ ರಂಗೋಲಿಯಿಂದ ತಿರಂಗ ಧ್ವಜ ಸಿದ್ಧವಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಬಿಡಿಸಿವ ರಂಗೋಲಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 300ಕ್ಕೂ ವಿದ್ಯಾರ್ಥಿಗಳು ನವ ನವೀನ ರೀತಿಯಲ್ಲಿ ತ್ರಿವರ್ಣ ಧ್ವಜ ಬಿಡಿಸಿ ಗಮನಸೆಳೆದಿದ್ದರು.

SCROLL FOR NEXT